Slide
Slide
Slide
previous arrow
next arrow

ಬಿ.ಪಿ.ಎಲ್. ಕಾರ್ಡ್ ಹೊಂದಿದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ

300x250 AD

ಶಿರಸಿ: ನಗರದ ಕಾಮಧೇನು ಜ್ಯುವೆಲರಿ ಸಿ.ಪಿ.ಬಝಾರ ಮತ್ತು ಉತ್ತರ ಕನ್ನಡ ಜಿಲ್ಲಾ ಶಿಕ್ಷಕ / ಶಿಕ್ಷಕಿಯರ ನಿರಂತರ ಸಹಾಯವಾಣಿ (ರಿ) ಮತ್ತು ದಿ ಗ್ಲೋಬಲ್ ಕನ್‌ಸಲ್ಟನ್ಸಿ ಸರ್ವೀಸಸ್ ಇವರ ಸಹಯೋಗದಲ್ಲಿ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿದ ಬಡ ಕುಟುಂಬದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ 3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿಯನ್ನು ಆಯೋಜಿಸಿದೆ. ಈ ತರಬೇತಿಯಲ್ಲಿ ಕಂಪ್ಯೂಟರ್ ಬೇಸಿಕ್, ಟ್ಯಾಲಿ, ಡಿ.ಟಿ.ಪಿ. ಹಾಗೂ ಇನ್ನಿತರವಿಷಯಗಳ ಬಗ್ಗೆ ನುರಿತ ಶಿಕ್ಷಕರಿಂದ ತರಬೇತಿ ನೀಡಿ ಪ್ರಮಾಣ ಪತ್ರ ನೀಡಲಾಗುವುದು. 3 ತಿಂಗಳುಗಳ ನಂತರ ಇನ್ನೂ ಹೆಚ್ಚಿನ ಕಂಪ್ಯೂಟರ ತರಬೇತಿಯನ್ನು ವಿದ್ಯಾರ್ಥಿಗಳು ಬಯಸಿದಲ್ಲಿ ಉಚಿತವಾಗಿ ಹೇಳಿಕೊಡಲಾಗುವುದು ಎಂದು ತಿಳಿಸಲಾಗಿದೆ.

ಕಂಪ್ಯೂಟರ್ ತರಬೇತಿಯು ಡಿ. ರಿಂದ ಪ್ರಾರಂಭವಾಗಲಿದ್ದು ಆಸಕ್ತ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ವಿಶ್ವನಾಥ ಗೌಡ 9880179177 / 7483382074 ಮತ್ತು 08384296094 ಸಂಪರ್ಕಿಸಲು ತಿಳಿಸಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಚಿತ ಕಂಪ್ಯೂಟರ ತರಬೇತಿಯ ಪ್ರಯೋಜನ ಪಡೆಯಲು ಕೋರಿದೆ.

300x250 AD
Share This
300x250 AD
300x250 AD
300x250 AD
Back to top