• Slide
    Slide
    Slide
    previous arrow
    next arrow
  • ಎಂಎಂ ಮಹಾವಿದ್ಯಾಲಯದಲ್ಲಿ ಎನಿಮೇಶನ್ ಸರ್ಟಿಫಿಕೇಟ್ ಕೋರ್ಸ್

    300x250 AD

    ಶಿರಸಿ: ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮೊಡರ್ನ ಎಜುಕೇಶನ್ ಸೊಸೈಟಿಯ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿಯಲ್ಲಿ ಪ್ರಥಮವಾಗಿ ಎರಡು ತಿಂಗಳಕಾಲದ ಎನಿಮೇಶನ್ ಸರ್ಟಿಫಿಕೇಟ್ ಕೋರ್ಸನ್ನು ಆರಂಭಿಸಲು ನಿರ್ಧರಿಸಲಾಗಿದೆ.
    ಈಗಾಗಲೇ ಮಹಾವಿದ್ಯಾಲಯದಲ್ಲಿ ಸಾಮಾನ್ಯ ವಿಷಯಗಳ ಜೊತೆಗೆ ಕಂಪ್ಯೂಟರ್, ಬಯೋಟೆಕ್ನಾಲಜಿ, ಪತ್ರಿಕೋದ್ಯಮ, ಪ್ರವಾಸೋದ್ಯಮ ಮುಂತಾದ ವಿರಳ ವಿಷಯಗಳು ಬೋಧಿಸಲ್ಪಡುತ್ತಿದ್ದು, ಬದಲಾದ ಕಾಲಘಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಹುಬ್ಬಳ್ಳಿಯ ಪ್ರತಿಷ್ಠಿತ ಅರೇನಾ ಎನಿಮೇಶನ್ ಕೇಂದ್ರದ ಜೊತೆಗೆ ಮಹಾವಿದ್ಯಾಲಯದಲ್ಲಿ ಎರಡು ತಿಂಗಳ ಸರ್ಟಿಫಿಕೇಟ್ ಕೋರ್ಸ್ ನ್ನು ಬರುವ ಡಿಸೆಂಬರ್ ೧ರಿಂದ ಆಯೋಜಿಸಲಾಗಿದೆ.ಪ್ರಸ್ತುತ ಎಂ.ಇ.ಎಸ್ ನಲ್ಲಿ ಓದುವ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಉಳಿದ ವಿದ್ಯಾರ್ಥಿಗಳಿಗೂ ಅವಕಾಶ ನೀಡುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಕಾಲೇಜ್ ಸಮಿತಿ ತಿಳಿಸಿದೆ.

    ಏನಿದು ಎನಿಮೇಶನ್ ಕೋರ್ಸ್?
    ಆಧುನಿಕ ತಂತ್ರಜ್ಞಾನದತ್ತ ದಾಪುಗಾಲಿಡುತ್ತಿರುವ ಭಾರತದಲ್ಲಿ ತಂತ್ರಜ್ಞಾನದ ಕೌಶಲ್ಯ ಹೊಂದಿದವರ ಕೊರತೆ ಎದ್ದು ಕಾಣುತ್ತಿದ್ದು ಈ ಎನಿಮೇಶನ್ ಕೋರ್ಸ್ ಮೂಲಕ ಗ್ರಾಫಿಕ್ ಡಿಸೈನಿಂಗ್, ಫೊಟೊಶೋಪ್ ವಿಷುಯಲ್ ಇಫೆಕ್ಟ್(VFX)ಗಳು ಇತ್ಯಾದಿಗಳನ್ನು ಕಲಿತು ಎನಿಮೇಶನ್ ಬಗ್ಗೆ ಯಾವುದೇ ಅರಿವು ಇಲ್ಲದ ಅಥವಾ ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಬಯಸುವರು ವಿವಿಧ ಸಾಪ್ಟವೇರ್‌ಗಳಲ್ಲಿ ಕೆಲಸ ಆರಂಭಿಸಬಹುದು. ವಿನ್ಯಾಸ ಮತ್ತು ದೃಶ್ಯೀಕರಣದ ಎಲ್ಲಾ ಅಂಶಗಳನ್ನು ಪ್ರಾಯೋಗಿಕವಾಗಿ ಇಲ್ಲಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕೋರ್ಸ್ನ ತರಬೇತಿಯ ನಂತರ ಪೋರ್ಟ್ಪೊಲಿಯೋ, ಲೋಗೊ ವಿನ್ಯಾಸ, ಬ್ರಾಂಡಿಂಗ್, ಮ್ಯಾಟ್ ಮತ್ತು ಡಿಜಿಟಲ್ ಪೇಂಟಿಂಗ್ ಹಾಗೂ ಚಲನಚಿತ್ರ ಸೃಜನಶೀಲತೆ, ವಿನ್ಯಾಸ ಪರಿಕಲ್ಪನೆಗಳಿಗೆ ಹೆಚ್ಚು ಮಹತ್ವ ದೊರೆಯಲಿದೆ.
    ಹುಬ್ಬಳ್ಳಿಯ ಸುಭಾಸ ಭಟ್ಟ ಹಾಗೂ ಅವರ ತಂಡ ತರಬೇತಿ ನೀಡಲಿದ್ದು ತರಬೇತಿ ಪಡೆದವರು Amazon, Byjus, KID, Netgains, TCS, KICK Radius, Studio Tale ಇತ್ಯಾದಿ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಅರ್ಹತೆ ಪಡೆಯುತ್ತಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top