Slide
Slide
Slide
previous arrow
next arrow

ಡಿ.1 ರಂದು ಸೋಂದಾ ವೆಂಕಟರಮಣ ದೇವಸ್ಥಾನದಲ್ಲಿ ದೀಪೋತ್ಸವ ಹಾಗೂ ಯಕ್ಷಗಾನ ಪ್ರದರ್ಶನ

300x250 AD

ಶಿರಸಿ: ಸೋಂದಾದ ಸಂಕಟಹರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಡಿಸೆಂಬರ್ 1ರಂದು ಸಂಜೆ 7 ರಿಂದ ದೆಹಲಿಯ ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಶಬರ ಸಂಸ್ಥೆ ಸೋಂದಾ ಇವರಿಂದ ದೀಪೋತ್ಸವ ಮತ್ತು ಶನೇಶ್ವರಾಂಜನೇಯ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸಭೆಯ ಅಧ್ಯಕ್ಷತೆಯನ್ನು ಜಾಗೃತ ವೇದಿಕೆಯ ಕಾರ್ಯಾಧ್ಯಕ್ಷ ರತ್ನಾಕರ ಹೆಗಡೆ ಬಾಡಲಕೊಪ್ಪ ವಹಿಸಲಿದ್ದು. ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಂದೇಶ ಭಟ್ ಉದ್ಘಾಟಿಸಲಿದ್ದಾರೆ.
ಅತಿಥಿಗಳಾಗಿ‌ ಶಿರಸಿ ತಾಲೂಕಾ ಪೋಟೋ ಗ್ರಾಪರ್ ಅಸೋಶಿಯೇಶನ್ ಅಧ್ಯಕ್ಷ ಮತ್ತು ಕರಾವಳಿ ಮುಂಜಾವು ಪತ್ರಿಕೆಯ ವರದಿಗಾರ ರಾಜು ಕಾನ್ಸೂರ್ ಆಗಮಿಸಲಿದ್ದಾರೆ. ನಂತರ ನಡೆಯುವ ಶನೇಶ್ವರಾಂಜನೇಯ ಯಕ್ಷಗಾನದಲ್ಲಿ , ಶ್ರೀಪಾದ ಹೆಗಡೆ ಬಾಳೆಗದ್ದೆ, ಶ್ರೀಪತಿ ಕಂಚೀಮನೆ, ವಿಘ್ನೇಶ್ವರ ಕೆರೆಕೊಪ್ಪ ಹಿಮ್ಮೇಳದಲ್ಲಿ ಭಾಗವಹಿಸುವರು. ಮುಮ್ಮೇಳದಲ್ಲಿ ಶ್ರೀಧರ ಹೆಗಡೆ ಚಪ್ಪರಮನೆ, ನಿರಂಜನ ಜಾಗ್ನಳ್ಳಿ, ಪ್ರವೀಣ ತಟ್ಟೀಸರ ಪಾತ್ರ ವಹಿಸಲಿದ್ದಾರೆ ಎಂದು ಶಬರ ಸಂಸ್ಥೆ ಕಾರ್ಯದರ್ಶಿ ನಾಗರಾಜ ಜೋಶಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top