• Slide
    Slide
    Slide
    previous arrow
    next arrow
  • ಶಿರಸಿಯಲ್ಲಿ ಮನ ಸೆಳೆದ ‘ಸ್ವರ ಸಂಗಮ’

    300x250 AD

    ಶಿರಸಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಆಶ್ರಯದಲ್ಲಿ ಜನನಿ ಮ್ಯೂಸಿಕ್ ಸಂಸ್ಥೆ (ರಿ) ಶಿರಸಿಯು ಮಧುವನ ಆರಾಧನಾ ಸಭಾಂಗಣದಲ್ಲಿ ‘ಸ್ವರ ಸಂಗಮ’ ಎಂಬ ಸಂಗೀತ ಕಾರ್ಯಕ್ರಮವನ್ನು ದಿ: 26-11-2022 ಶನಿವಾರ ಸಂಜೆ 5 ಘಂಟೆಗೆ ಹಮ್ಮಿಕೊಂಡಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರೋ.ಕೆ.ವಿ. ಭಟ್ ರವರು ವೇದ ಕಾಲದಿಂದಲೂ ಸಂಗೀತಕ್ಕೆ ವಿಶೇಷ ಸ್ಥಾನಮಾನಗಳಿದ್ದು ನಾಲ್ಕನೇ ವೇದವಾದ ಸಾಮವೇದದಲ್ಲಿ ಸಂಪೂರ್ಣವಾಗಿ ಸಂಗೀತದ ಬಗ್ಗೆಯೇ ಉಲ್ಲೇಖವಿದೆ. ಸಂಗೀತವು ತನ್ನ ಶಕ್ತಿಯಿಂದ ಎಂಥವರನ್ನು ತನ್ನೆಡೆ ಆಕರ್ಷಿಸುವ ಶಕ್ತಿಯುಳ್ಳದ್ದು ಎಂದರು. ಹಾಗೂ ದೇಶದಾದ್ಯಂತ ಭಗವದ್ಗೀತಾ ಅಭಿಯಾನ ನಡೆಯುತ್ತಿದ್ದು ಭಗವದ್ಗೀತಾ ಪಠಣವನ್ನು ಹಮ್ಮಿಕೊಂಡಿದ್ದು ರಾಷ್ಟಿçÃಯ ಮಟ್ಟದ ಅಭಿಯಾನಕ್ಕೆ ಜನನಿ ಸಂಸ್ಥೆಯು ಈ ಮೂಲಕ ಕೈಜೋಡಿಸಿದ್ದು ಶ್ಲಾಘನೀಯ ಎಂದರು. ನಿವೃತ್ತ ಪ್ರಾಚಾರ್ಯರಾದ ಆರ್.ಜಿ. ಹೆಗಡೆಯವರು ಸಂಗೀತದ ಯಾವುದೇ ಮಜಲುಗಳಿದ್ದರೂ ಶಾಸ್ತಿçÃಯ ಸಂಗೀತಕ್ಕೆ ಮನಸೋಲದೇ ಇರುವವರು ಇಲ್ಲ ಅಂಥ ವಿಶೇಷತೆಯನ್ನು ಸಂಗೀತ ಹೊಂದಿದೆ ಎಂದರು.

    ರೋ. ಮಾಜಿ ಅಧ್ಯಕ್ಷರಾದ ರೋ. ವಿಷ್ಣು ಹೆಗಡೆಯವರು ಮಾತನಾಡಿ ಯಾವುದೇ ಸಾಹಿತ್ಯಕ್ಕೆ ಸಂಗೀತದ ಸ್ಪರ್ಷ ನೀಡಿದಾಗ ಅದು ನಾವು ಚಿಕ್ಕವರಿರುವಾಗ ಹಾಡುವ ಮಕ್ಕಳ ಹಾಡಿರಬಹುದು ಶಾಲಾ ಪಠ್ಯದಲ್ಲಿರುವ ಕವಿತೆ ಇರಬಹುದು ಅದನ್ನು ರಾಗ ಸಂಯೋಜಿಸಿ ಹಾಡಿದಾಗ ಸಾಹಿತ್ಯವೂ ಅದರಿಂದ ನೆನಪಿನಲ್ಲಿ ಉಳಿಯುತ್ತದೆ ಎಂದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಭಗವದ್ಗೀತೆಯ ಪಠಣ ಹಾಗೂ ಭಕ್ತಿ ಸಂಗೀತವನ್ನು ಸುಮಂಗಲಾ ಹೆಗಡೆ ಮಂಡೇಮನೆ, ಹೇಮಾ ಹೆಗಡೆ, ಶಿರಸಿ, ಲತಾ ಹೆಗಡೆ ಶಿರಸಿ, ಜ್ಯೋತಿ ಹೆಗಡೆ, ಶಿರಸಿ ಮತ್ತು ಆಶಾ ಹೆಗಡೆ ಶಿರಸಿ ನಡೆಸಿಕೊಟ್ಟರು. ಭಕ್ತಿ ಸಂಗೀತದಲ್ಲಿ ಶಾಂತಲಾ ಆರ್. ಹೆಗಡೆ, ತೇಜಸ್ವಿನಿ ಎಸ್. ಬಡಗಿ, ವಾಗ್ದೇವಿ ಶೆಟ್ಟಿ, ದೀಪಾ ವಸಂತ ನಾಯ್ಕ, ಧನ್ಯಾ ಎಸ್. ಗೌಡ, ಮೀನಾಕ್ಷಿ ಎಚ್. ಕೆ. ಗಿರಿಜಾ ಜಿ ನಾಡಿಗೇರ ಹಾಗೂ ವಿಜಯದಾಸ್ ಇವರಿಗೆ ರೇಖಾ ದಿನೇಶ ಹರ‍್ಮೋನಿಯಂನಲ್ಲಿ ಕಿರಣ ಹೆಗಡೆ ಕಾನಗೋಡ ತಬಲಾದಲ್ಲಿ ಸಹಕರಿಸಿದರು.

    300x250 AD

    ಗಣಪತಿ ಹೆಗಡೆ ಯಲ್ಲಾಪುರ ಇವರು ತಮ್ಮ ಗಾಯನ ಪ್ರಸ್ತುತಿಯಲ್ಲಿ ರಾಗ್ ಪೂರಿಯಾ ಕಲ್ಯಾಣವನ್ನು ಆಜಸೋಬಾನ ವಿಲಂಬಿತ್ ಖ್ಯಾಲ್ ದೊಂದಿಗೆ ಪ್ರಾರಂಭಿಸಿ ಮೋರೆ ಘರ ಆಜಾ ಎಂಬ ದೃತ್ ಖ್ಯಾಲ್‌ಅನ್ನು ಪ್ರಸ್ತುತ ಪಡಿಸಿದರು. ನಂತರ ರಾಗ್ ಜೋಗದಲ್ಲಿ ಕೈಸೆ ಕೈಸೆ ಹಾಗೂ ಸಜನ್ ಮೋರೆ ಘರ ಬಂದಿಶ್‌ಗಳನ್ನು ಅತ್ಯಂತ ಮನಮೋಹಕವಾಗಿ ಪ್ರಸ್ತತಪಡಿಸಿದರು. ಕೊನೆಯಲ್ಲಿ ಹರಿಕುಣಿದಾ ದಾಸರಪದ ಹಾಗೂ ಮರಾಠಿ ಅಭಂಗ ಭೈರವಿಯಲ್ಲಿ ಕಾಯೋ ಕರುಣಾನಿಧೇ ಪ್ರಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಸಂಪನ್ನ ಗೊಳಿಸಿದರು. ಇವರಿಗೆ ಹರ‍್ಮೋನಿಯಂನಲ್ಲಿ ಪ್ರಕಾಶ ಹೆಗಡೆ ಯಡಳ್ಳಿ, ತಬಲಾದಲ್ಲಿ ರಾಮದಾಸ ಹೆಗಡೆ ಅವರು ಸಮರ್ಥವಾಗಿ ಸಹಕರಿಸಿದರು. ಪ್ರಾರಂಭದಲ್ಲಿ ದಿನೇಶ ಹೆಗಡೆ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top