• Slide
  Slide
  Slide
  previous arrow
  next arrow
 • ಪಾದಯಾತ್ರಿಕ ಯೋಗೇನ್ ಶಾಗೆ ತಹಶೀಲ್ದಾರರ ಸ್ವಾಗತ

  300x250 AD

  ಅಂಕೋಲಾ: ಪರಿಸರ ಸಮತೋಲನ, ಆರೋಗ್ಯ ಪೂರ್ಣ ಜೀವನದ ಜಾಗೃತಿಯೊಂದಿಗೆ 40,000 ಕಿಲೋ ಮೀಟರ್ ಪಾದಯಾತ್ರೆಯ ಮೂಲಕ ಗುಜರಾತದಿಂದ ಹೊರಟು ಪಟ್ಟಣಕ್ಕೆ ತಲುಪಿದ ಯೋಗೇನ್ ಶಾ ಅವರಿಗೆ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಉದಯ್ ಕುಂಬಾರ ಸ್ವಾಗತಿಸಿ ಬರಮಾಡಿಕೊಂಡರು.
  ಈ ವೇಳೆ ಮಾತನಾಡಿದ ಯೋಗೇನ್, ವೈದ್ಯರ ಬಳಿ ಹೋಗದೆ ಎಲ್ಲರೂ ಉತ್ತಮ ಆರೋಗ್ಯ ಹೊಂದುವ ಮಾರ್ಗದ ಕುರಿತು ಜಾಗೃತಿ ಮೂಡಿಸುತ್ತ ನಿಸರ್ಗದ ಸಮತೋಲವನ್ನು ಕಾಪಾಡಿಕೊಳ್ಳಲು ನಡೆಯುತ್ತಲೇ ಇರಿ ನಡೆಯುತ್ತಲೇ ಇರಿ ಎಂಬ ಸಂದೇಶವನ್ನು ಸಾರಿದರು.
  ಯೋಗೇನ್ 2002 ರಲ್ಲಿ ಆಕ್ಸ್ ಫರ್ಡ್ ನಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾಗ ಅಂಕ್ಲೊ ಸ್ಪಾಂಡಿಲೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದರು. ಬೆನ್ನು ಮೂಳೆ ತೀವ್ರ ಸವಕಳಿಯಿಂದಾಗಿ ಯಾವುದೇ ಕೆಲಸಗಳನ್ನು ಮಾಡಲು ಆಗುತ್ತಿರಲಿಲ್ಲ. ಹೀಗಾಗಿ 2007ರಲ್ಲಿ ಭಾರತಕ್ಕೆ ವಾಪಸ್ಸಾದರು. ಯಾವುದೇ ಔಷಧಗಳಿಂದ ಗುಣಮುಖರಾಗದ ಇವರು ಕ್ರಮೇಣ ಯೋಗ, ದೈಹಿಕ ಶ್ರಮ ಮತ್ತು ಕಾಲ್ನಡಿಗೆಯ ಮೊರೆ ಹೋದರು. ಈಗ ಉತ್ತಮ ದೈಹಿಕ ಆರೋಗ್ಯವನ್ನು ಹೊಂದಿರುವ ಇವರು ದೇಶಾದ್ಯಂತ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.
  2020 ಜೂನ್ 15ರಂದು ಗುಜರಾತದ ವಡೋದರದಿಂದ ಪಾದಯಾತ್ರೆಯನ್ನು ಪ್ರಾರಂಭಿಸಿ ಚಂಡೀಘಡ ಮೂಲಕ 1500 ಕಿ.ಮೀ. ಕ್ರಮಿಸಿ ಆಗಸ್ಟ್ 15ರಂದು ದೆಹಲಿ ತಲುಪಿದ್ದರು. ಇದೀಗ ದಕ್ಷಿಣ ದಿಕ್ಕಿನಲ್ಲಿ ಸಾಗಿ ಗೋವಾ- ಕರ್ನಾಟಕ- ಕೇರಳ ಮೂಲಕ ಕನ್ಯಾಕುಮಾರಿ ತಲುಪಲಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top