Slide
Slide
Slide
previous arrow
next arrow

ಡಿ. 3, 4ಕ್ಕೆ ‘ನೀನಾಸಂ ನಾಟಕೋತ್ಸವ 2022’

300x250 AD

ಅಂಕೋಲಾ: ತಾಲೂಕಿನ ಸ್ವಾತಂತ್ರ‍್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ಸಂಗಾತಿ ರಂಗಭೂಮಿ ಆಶ್ರಯದಲ್ಲಿ ಡಿ. 3 ಮತ್ತು 4ರಂದು ಸಂಜೆ 6.30ಕ್ಕೆ ಎರಡು ದಿನಗಳ ಕಾಲ ನೀನಾಸಂ ನಾಟಕೋತ್ಸವ 2022 ಕಾರ್ಯಕ್ರಮ ನಡೆಯಲಿದೆ ಎಂದು ನೀನಾಸಂ ನಾಟಕೋತ್ಸವ ಸಂಘಟನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಪಿ. ಗಾಂವಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ- ವಿದೇಶಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿ ಹೆಸರು ಪಡೆದಿರುವ ನೀನಾಸಂ ನಾಟಕಗಳನ್ನು ವೀಕ್ಷಿಸುವ ಅವಕಾಶ ತಾಲೂಕಿನ ನಾಟಕ ಅಭಿಮಾನಿಗಳಿಗೆ ದೊರಕಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಪ್ರೋತ್ಸಾಹ ನೀಡುವಂತೆ ಕೇಳಿಕೊಂಡರು.
ಹಿರಿಯ ಸಾಹಿತಿ ರಂಗಭೂಮಿ ಕಲಾವಿದ ಸಮಿತಿಯ ಗೌರವಾಧ್ಯಕ್ಷ ಮೋಹನ ಹಬ್ಬು ಮಾತನಾಡಿ, ಅಂಕೋಲಾದಲ್ಲಿ ಬಹಳ ವರ್ಷಗಳಿಂದ ನೀನಾಸಂ ನಾಟಕಗಳ ಪ್ರದರ್ಶನ ನಡೆಯುತ್ತ ಬಂದಿದ್ದು ಅವು ಹೆಚ್ಚು ಹೆಚ್ಚು ಚಿಂತನಾಶೀಲವಾಗಿರುತ್ತವೆ ಈ ವರ್ಷ ರವೀಂದ್ರನಾಥ್ ಟ್ಯಾಗೋರ್ ಅವರ ‘ಮುಕ್ತಧಾರಾ’ ಮತ್ತು ಯೂರಿಪೀಡಿಸ್ ಅವರ ‘ಇಪಿಜೀನಿಯಾ’ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.
ಗೌರವ ಸದಸ್ಯ ಜಗದೀಶ ನಾಯಕ, ಹೊಸ್ಕೇರಿ, ವಿಶ್ರಾಂತ ಪ್ರಾಚಾರ್ಯ ರವೀಂದ್ರ ಕೇಣಿ, ಸಂಗಾತಿ ರಂಗಭೂಮಿ ಕಾರ್ಯಾಧ್ಯಕ್ಷ ಕೆ. ರಮೇಶ, ಸಂತೋಷ ಗೌಡ, ಮಾರತಿ ನಾಯ್ಕ, ಲಕ್ಷ್ಮೇಶ್ವರ, ತಿಮ್ಮಣ್ಣ ಭಟ್ಟ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top