ಅಂಗಾಂಗ ದಾನಿಗಳ ದಿನದಂದು ಅಂಗಾಂಗ ದಾನವನ್ನು ಪ್ರಚೋದಿಸಲು ಮತ್ತು ಪ್ರೇರೇಪಿಸುವ ಉದ್ದೇಶದಿಂದ ಆಚರಿಸಲಾಗುವುದು. ನಮ್ಮ ದೇಹದಲ್ಲಿರುವ ಅಂಗಗಳನ್ನು ಬೇರೆ ವ್ಯಕ್ತಿಗೆ ದಾನ ಮಾಡುವುದರಿಂದ ನಮ್ಮ ದೇಶದಲ್ಲಿ ಅಂಗಾಂಗ ಕಳೆದುಕೊಂಡ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗುವುದು. ಸತ್ತಮೇಲೆ ನಮ್ಮ ದೇಹದ ಅಂಗಗಳು ಮಣ್ಣಲ್ಲಿ ಮಣ್ಣಾಗುವ ಬದಲು, ಜೀವಂತವಾಗಿರಿಸೋಣ, ಅಂಗಾಂಗ ದಾನ ಮಾಡಲು ಜನರಲ್ಲಿ ಜಾಗೃತಿ ಮೂಡಿಸೋಣ. ಮಣ್ಣಾಗುವ ದೇಹವನ್ನು ಮತ್ತೊಬ್ಬರ ಜೀವನದ ಬೆಳಕಾಗಿಸುವ ಪಣ ತೊಡೋಣ. ಅಂಗಾಂಗ ದಾನಿಗಳಾಗಿ, ಜೀವ ರಕ್ಷಕರಾಗಿ ರಾಷ್ಟ್ರೀಯ ಅಂಗಾಂಗ ದಾನಿಗಳ ದಿನದ ಶುಭಾಶಯಗಳು. |
ನ. 27ಕ್ಕೆ ರಾಷ್ಟ್ರೀಯ ಅಂಗಾಂಗ ದಾನಿಗಳ ದಿನ
