• Slide
    Slide
    Slide
    previous arrow
    next arrow
  • ದಂತ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಅಗತ್ಯ: ಡಾ.ರವಿ ಹೆಗಡೆ

    300x250 AD

    ಸಿದ್ದಾಪುರ: ವಿದ್ಯಾರ್ಥಿಗಳಲ್ಲಿ ದಂತ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಅಗತ್ಯ. ಅವರಿಗೆ ತಮ್ಮ ಹಲ್ಲುಗಳ ಸ್ವಚ್ಛತೆ, ಹಾಗೂ ಅನಾರೋಗ್ಯಕರವಾದ ತಿನಿಸುಗಳನ್ನು ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಎಂಬುದನ್ನು ಮನೆ ಹಾಗೂ ಶಾಲೆಗಳಲ್ಲಿ ತಿಳಿಸಬೇಕು. ದಂತ ಆರೋಗ್ಯದ ಗಮನ ಅಗತ್ಯ ಎಂದು ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಡಾ.ರವಿ ಹೆಗಡೆ ಹೂವಿನಮನೆ ಹೇಳಿದರು.
    ಅವರು ಶಿರಳಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಲಯನ್ಸ್ ಕ್ಲಬ್‌ದಿಂದ ಏರ್ಪಡಿಸಲಾದ ದಂತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
    ದಂತ ವೈದ್ಯ ಡಾ.ರಾಜು ಕೆ.ಭಟ್ಟ ಮಾತನಾಡಿ, ಹಲ್ಲುಗಳು ಮಾನವನ ಆರೋಗ್ಯವನ್ನು ಕಾಪಾಡುವಲ್ಲಿ ನೆರವು ನೀಡುತ್ತವೆ. ಆಹಾರವನ್ನು ಸರಿಯಾಗಿ ಜಗಿದು ತಿನ್ನುವುದಕ್ಕೆ ಸಹಕಾರಿ. ಬಾಯಿಯ ಸ್ವಚ್ಛತೆ, ಹಲ್ಲುಗಳ ದೃಢತೆಯನ್ನು ಕಾಪಾಡಿಕೊಳ್ಳುವಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ, ಸಮುದಾಯದಲ್ಲಿ ನಾಗರಿಕರಿಗೆ ಸೂಕ್ತ ಮಾರ್ಗದರ್ಶನ ಅಗತ್ಯ ಎಂದರು.
    ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ರವಿ ಎಂ.ಪಾಟೀಲ ವಹಿಸಿದ್ದರು. ಮುಖ್ಯಶಿಕ್ಷಕಿ ವೀಣಾ ಹೆದ್ದಾರಿಮನೆ ಮಾತನಾಡಿದರು. ನಿವೃತ್ತ ಮುಖ್ಯಶಿಕ್ಷಕಿ ವಿಜಯಾ ಶೇಟ್, ನಿವೃತ್ತ ಜಿಲ್ಲಾ ಬಿಸಿಎಂ ಅಧಿಕಾರಿ ಡಿ.ವಿ.ಶೇಟ್, ಸತೀಶ ಗೌಡರ್ ಹೆಗ್ಗೋಡಮನೆ, ನಾಗರಾಜ ದೋಶೆಟ್ಟಿ, ಎ.ಜಿ.ನಾಯ್ಕ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ತಿಮ್ಮಪ್ಪ ನಾಯ್ಕ, ಲಯನ್ಸ್ ಕೋಶಾಧ್ಯಕ್ಷ ಆನಂದ ಶೇಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿ.ಎಸ್.ಗೌಡರ್ ಹೆಗ್ಗೋಡ್ಮನೆ ಸ್ವಾಗತಿಸಿದರು. ಕಾರ್ಯದರ್ಶಿ ಕುಮಾರ ಗೌಡರ್ ಹೊಸೂರು ವಂದಿಸಿದರು. ಜಿ.ಜಿ.ಹೆಗಡೆ ಬಾಳಗೋಡ ನಿರೂಪಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top