Slide
Slide
Slide
previous arrow
next arrow

ದೇಶಕ್ಕೆ ಸಂವಿಧಾನ ಸರ್ವಶ್ರೇಷ್ಠ: ಹೂವಿನಮನೆ

300x250 AD

ಸಿದ್ದಾಪುರ: ಯಾವುದೇ ದೇಶಕ್ಕೆ ಅವರವರ ಸಂವಿಧಾನ ಶ್ರೇಷ್ಠ. ಭಾರತ ಬೃಹತ್ತಾದ ಸಂವಿಧಾನವನ್ನು ಹೊಂದಿದ್ದು, ಜಗತ್ತಿನಲ್ಲಿ ಬಲುದೊಡ್ಡ ಸಂವಿಧಾನ. ಇದನ್ನು ಓದಿ ಅರ್ಥೈಸಿಕೊಳ್ಳಬೇಕು ಎಂದು ಆಶಾಕಿರಣ ಟ್ರಸ್ಟ್ ಅಧ್ಯಕ್ಷ ವಕೀಲ ರವಿ ಹೆಗಡೆ ಹೂವಿನಮನೆ ಹೇಳಿದರು.
ಅವರು ಹಾಳದಕಟ್ಟಾದ ಜೆ.ಎಂ.ಆರ್ ಅಂಧಮಕ್ಕಳ ವಸತಿ ಶಾಲೆಯಲ್ಲಿ ನಡೆದ ಸಂವಿಧಾನ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿ.ಜಿ.ಹೆಗಡೆ ಬಾಳಗೋಡರವರು ಸಂವಿಧಾನ ದಿನಾಚರಣೆ ಮಹತ್ವವನ್ನು, ಭಾರತ ಸಂವಿಧಾನದ ರಚನಾ ಸಭೆ ಕುರಿತು ಮಾತನಾಡಿ, ಜಾತ್ಯಾತೀತ ಧರ್ಮ ನಿರಪೇಕ್ಷ ರಾಷ್ಟ್ರ, ಅಮೆರಿಕಾ, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ಸೋವಿಯತ್ ರಷ್ಯಾ, ಕೆನಡಾ, ಐರ್ಲೆಂಡ್ ಮುಂತಾದ ದೇಶಗಳ ಸಂವಿಧಾನದ ಒಳ್ಳೆಯ ಅಂಶಗಳನ್ನು ಸ್ವೀಕರಿಸಿ ಅತ್ಯುತ್ತಮ ಸಂವಿಧಾನ ರಚಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಶ್ರಮಿಸಿದ್ದು, ಸಂವಿಧಾನ ಕರಡು ಸಮಿತಿ ಸದಸ್ಯರೂ ಸಹ ಸೇರಿ ರಚಿಸಿದ್ದಾರೆ. ಆಗ ಡಾ.ಅಂಬೇಡ್ಕರರು ದಿನಕ್ಕೆ 18 ಗಂಟೆ ಕೆಲಸ ಮಾಡಿ ಎರಡು ವರ್ಷ 11 ತಿಂಗಳು 17 ದಿನಗಳಲ್ಲಿ ಸಂವಿಧಾನ ನೀಡಿದ್ದಾರೆ ಎಂದರು.
ಆಶಾಕಿರಣ ಟ್ರಸ್ಟ್ ಉಪಾಧ್ಯಕ್ಷ ಸಿ.ಎಸ್.ಗೌಡರ್ ಹೆಗ್ಗೋಡಮನೆ, ಟ್ರಸ್ಟ್ ಸದಸ್ಯ ವಾಸುದೇವ ಶೇಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಶಿಕ್ಷಕಿ ಆರತಿ ಪಂಡಿತ ಅವರಿಂದ ಸ್ವಾಗತ, ಶಿಕ್ಷಕಿ ರೇಖಾ ಅವರಿಂದ ವಂದನೆ, ಲತಾ ಮಡಿವಾಳರಿಂದ ನಿರೂಪಣೆ ನಡೆಯಿತು.

300x250 AD
Share This
300x250 AD
300x250 AD
300x250 AD
Back to top