ಕುಮಟಾ: ತಾಲೂಕಿನ ಮಿರ್ಜಾನ್‌ನ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾಲಯದ ಪ್ರಾಂಶುಪಾಲೆ ಲೀನಾ ಗೊನೇಹಳ್ಳಿ ಸಂವಿಧಾನ ದಿನಾಚರಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಹಿರಿಯ ಶಿಕ್ಷಕ ಎಂ.ಜಿ.ಹಿರೇಕುಡಿ, ಸಂವಿಧಾನ ಹೇಗೆ, ಯಾವಾಗ ರಚನೆ ಆಯಿತು, ಅದರ ಸಮಿತಿಯ ಸದಸ್ಯರು, ಅಧ್ಯಕ್ಷರು ಯಾರು? ಭಾರತದ ಸಂವಿಧಾನದಲ್ಲಿ ಬರುವ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು.
ವಿದ್ಯಾರ್ಥಿ ಸಿಂಚನಾ ಸಂಗಡಿಗರು ಪ್ರಾರ್ಥಿಸಿದರು. ಪ್ರಜ್ಞಾ ಸೂರಿ ಸ್ವಾಗತಿಸಿದಳು. ಸಮೀಕ್ಷಾ ಜೈನ್ ಭಾರತದ ಸಂವಿಧಾನದ ಪೀಠಿಕೆಯನ್ನು ಓದಿದಳು. ಶಾಂಭವಿ ಮತ್ತು ಸಂಗಡಿಗರು ಭಾರತದ ಸಂವಿಧಾನದ ಕುರಿತು ಗೀತೆಯನ್ನು ಹಾಡಿದರು. ಶುಮೈಲಾ ಮತ್ತು ಸಂಗಡಿಗರು ‘ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು’ ಎಂಬ ಸ್ಕಿಟ್ ಪ್ರಸ್ತುತಪಡಿಸಿದರು. ತನುಶ್ರೀ ನಾಯ್ಕ ಕಾರ್ಯಕ್ರಮ ನಿರೂಪಿಸಿದಳು. ಭಾರತದ ಸಂವಿಧಾನದ ಮಹತ್ವದ ಬಗ್ಗೆ ದೃಶ್ಯಾವಳಿಯ ಮೂಲಕ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ದಿಯಾ ನಾಯಕ ವಂದಿಸಿದಳು.
ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಸಂವಿಧಾನ ದಿನಾಚರಣೆ
