Slide
Slide
Slide
previous arrow
next arrow

ಆಶಯ ತಿಳಿದುಕೊಂಡರೆ ಅದರಂತೆ ನಡೆಯುವುದೇ ಸಂವಿಧಾನಕ್ಕೆ ನೀಡುವ ಗೌರವ: ಅರ್ಚನಾ ಪಟಗಾರ್

300x250 AD

ಕುಮಟಾ: ಪ್ರತಿಯೊಬ್ಬರೂ ನಮ್ಮ ಸಂವಿಧಾನದ ಆಶಯಗಳನ್ನು ತಿಳಿದುಕೊಂಡು ಹಕ್ಕು, ಕರ್ತವ್ಯಗಳನ್ನು ಪಾಲಿಸಿದರೆ, ಅದೇ ಸಂವಿಧಾನಕ್ಕೆ ನೀಡುವ ಗೌರವವಾಗಿದೆ ಎಂದು ವಕೀಲರಾದ ಅರ್ಚನಾ ವಿನಾಯಕ ಪಟಗಾರ ಹೇಳಿದರು.
ತಾಲೂಕಿನ ಹೆಗಡೆಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಮೇಲು- ಕೀಳು- ಲಿಂಗ ಭೇದ- ಭಾವ ಇಲ್ಲ. ಎಲ್ಲರೂ ಸಮಾನರು ಎಂದು ಸಂವಿಧಾನ ತಿಳಿಸಿದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿರುವುದರಿಂದ ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದದ್ದು ಅತೀ ಮುಖ್ಯವಾಗಿದೆ ಎಂದರು.
ಮುಖ್ಯಾಧ್ಯಾಪಕಿ ಮಂಗಲಾ ಹೆಬ್ಬಾರ್ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ನೀಡಲಾಗಿದೆ. ನಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಮಾತ್ರ ನಾವು ಅದನ್ನು ಪ್ರಶ್ನಿಸುತ್ತೇವೆ. ಆದರೆ ಅಷ್ಟೇ ಜವಾಬ್ದಾರಿ ಹೊಂದಿರುವ ಕರ್ತವ್ಯಗಳನ್ನು ನಾವು ಮರೆತು ಬಿಡುತ್ತೇವೆ. ಇದರಿಂದ ಸಂವಿಧಾನದ ಆಶಯದಲ್ಲಿ ಅಸಮತೋಲನ ಉಂಟಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಂವಿಧಾನದ ಹಕ್ಕು ಮತ್ತು ಕರ್ತವ್ಯ ಎರಡನ್ನೂ ಸರಿಯಾಗಿ ಅರ್ಥ ಮಾಡಿಕೊಂಡು, ಪರಿಪಾಲಿಸಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಶ್ರೀಧರ ಗೌಡ ಪ್ರಾಸ್ತಾವಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶ್ಯಾಮಲ ಪಟಗಾರ ಸಂವಿಧಾನದ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆ, ಸಂವಿಧಾನದ ಕುರಿತು ಭಾಷಣ, ಹಾಡು ಹಾಡುವ ಕಾರ್ಯಕ್ರಮವನ್ನು ಅತಿಥಿ ಶಿಕ್ಷಕಿ ಲಕ್ಷ್ಮಿ ನಾಯ್ಕ ನಿರ್ವಹಿಸಿದರು. ಈ ಸಂದರ್ಭದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಯೋಗಿತಾ ನಾಯ್ಕ ಉಪಸ್ಥಿತರಿದ್ದು ಶುಭ ಕೋರಿದರು. ಶಿಕ್ಷಕಿಯರಾದ ನಯನ ಪಟಗಾರ, ಭಾಗ್ಯಲಕ್ಷ್ಮಿ ನಾಯಕ ಸಹಕರಿಸಿದರು. ಶಾಲಾ ಮಂತ್ರಿ ನಮೃತ ಪಟಗಾರ ಸ್ವಾಗತಿಸಿದರು. ಸಂಜನಾ ನಾಯ್ಕ ವಂದಿಸಿದರು. ರಕ್ಷಾ ನಾಯ್ಕ, ಧನ್ಯಶ್ರೀ ಪಟಗಾರ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top