ಕಾರವಾರ: ವಿವಿಧೆಡೆ ಓಸಿ, ಅಂದರ್ ಬಾಹರ್ ಆಟದಲ್ಲಿ ತೊಡಗಿಕೊಂಡಿದ್ದವರ ಮೇಲೆ ದಾಳಿ ನಡೆಸಿರುವ ಪೊಲೀಸರು, 13 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಜೊಯಿಡಾ ತಾಲೂಕಿನ ಕೊಣಪಾ ಗ್ರಾಮದ ಹಳ್ಳಕ್ಕೆ ಅಡ್ಡಲಾಗಿ ಹಾಕಿರುವ ಬ್ರಿಡ್ಜ್ ಹತ್ತಿರ ಅರಣ್ಯ ಪ್ರದೇಶದಲ್ಲಿ ವೆಸ್ಟ್ಕೋಸ್ಟ್ ಪೇಪರ್ ಮಿಲ್‌ನ ಕಾರ್ಮಿಕರು ಇಸ್ಪೀಟ್ ಆಡುತ್ತಿದ್ದರೆಂಬ ಮಾಹಿತಿಯಾಧಾರದಲ್ಲಿ ದಾಳಿ ನಡೆಸಿದ ಗಾಂಧಿನಗರದ ಇಜ್ರಾ ಬೆಂಜಮೀನ, ಜಿಲಾನಿ ರೆಹಮಾನ್, ಬಾಬು ನಾಯ್ಕೋಡಿ, ಯಲ್ಲಪ್ಪಾ ಮೊಳಕ್ಷಿ, ನಿರ್ಮಲ್‌ನಗರದ ಸಂದೀಪ ಕಾಂಬಳೆ, ಬೈಲ್‌ಪಾರದ ಜಾನ್ಸನ್ ಸಂಟಯ್ಯಾ, ವೆಂಕಟೇಶ ಮಲ್ಲಾಪುರಂ, ಹಳಿಯಾಳ ರೋಡ್ ಗೇಟ್ ನಂ.3ರ ಬಸವರಾಜ ಅಕ್ಕಿ ಹಾಗೂ ಬಾಂಬೆಚಾಳದ ಮೋಹನ ಪಡುವಳಕರ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಹೊನ್ನಾವರದಲ್ಲಿ ಹೊಸಾಡದ ರಸ್ತೆಯಲ್ಲಿನ ಹೋಟೆಲ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆಡುತ್ತಿದ್ದ ಗದ್ದೆಮನೆಯ ಮಂಜುನಾಥ ಗೌಡ, ಕೆಳಗಿನ ಮೂಡ್ಕಣಿಯ ಜಾಕಿ ಬಸ್ತಾಂವ್‌ನನ್ನು ಹಾಗೂ ಉಪ್ಪೋಣಿ ಗ್ರಾಮ ಪಂಚಾಯತ್ ಹತ್ತಿರ ಇರುವ ಅಂಗಡಿಯ ಎದುರು ಸಾರ್ವಜನಿಕ ಸ್ಥಳದಲ್ಲಿ ಓಸಿ ಆಡಿಸುತ್ತಿದ್ದ ಉಪ್ಪೋಣಿಯ ಕೇಶವ ನಾಯ್ಕ, ಮಾಗೋಡದ ಮಾರುತಿ ನಾಯ್ಕನನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.