• Slide
    Slide
    Slide
    previous arrow
    next arrow
  • ಸರಕಾರಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ರೋರ‍್ಯಾಕ್ಟ್ ಸಂಸ್ಥೆಯ ಪದಗ್ರಹಣ

    300x250 AD

    ಕಾರವಾರ: ರೋಟರಿ ಕ್ಲಬ್ ವತಿಯಿಂದ ಮಾಜಾಳಿ ಸರಕಾರಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ರೋರ‍್ಯಾಕ್ಟ್ ಸಂಸ್ಥೆಯ ಪದಗ್ರಹಣ ಸಮಾರಂಭ ನಡೆಯಿತು.
    ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಎಲ್ಲರನ್ನೂ ಸ್ವಾಗತಿಸಿದರು. ರೋರ‍್ಯಾಕ್ಟ್ ಚೇರ್‌ಮನ್ ಗೋವಿಂದ್ರಾಯ್ ಮಾಂಜ್ರೇಕರ ರೋರ‍್ಯಾಕ್ಟ್ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಪದಗ್ರಹಣಾಧಿಕಾರಿಯಾಗಿ ಬಂದ ನಾಗರಾಜ ಜೋಶಿ ನೂತನ ರೋರ‍್ಯಾಕ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ರೋರ‍್ಯಾಕ್ಟ್ ವಿಧಿಯನ್ನು ಬೋಧಿಸಿ, ವಿದ್ಯಾರ್ಥಿಗಳು ಓದು- ವಿದ್ಯಾಭ್ಯಾಸದೊಂದಿಗೆ ಯಶಸ್ಸು ಹಾಗೂ ತೃಪ್ತಿ ಜೀವನ ಜನಡೆಸಲು ಸಂಘ- ಸAಸ್ಥೆಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. 
    ರೋರ‍್ಯಾಕ್ಟ್ ಕ್ಲಬ್‌ಗೆ ನೂತನ ಅಧ್ಯಕ್ಷರಾಗಿ ಶಮಾ ಸೈಯದ್, ಕಾರ್ಯದರ್ಶಿಯಾಗಿ ಶೀತಲ ಮೆಲವಂಕಿ, ಖಜಾಂಚಿಯಾಗಿ ಅಮೃತ ಸೂರ್ಯವಂಶಿ ಹಾಗೂ ಇತರ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ರೋರ‍್ಯಾಕ್ಟ್ ಅಧ್ಯಕ್ಷೆ ಶಮಾ ಸೈಯದ್‌ರವರು ತಮ್ಮ ರೋರ‍್ಯಾಕ್ಟ್ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ಮಾಡಲಿಚ್ಛಿಸುವ ಕಾರ್ಯಗಳನ್ನು ವಿವರಿಸಿದರು. ರೋಟರಿ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕು ಎನ್ನುವುದನ್ನು ವಿವರಿಸಿದರು.
    ಕಾರ್ಯದರ್ಶಿ ಗುರುದತ್ತ ಬಂಟ ಕ್ಲಬ್ ಆಡಳಿತ ಹೇಗೆ ನಡೆಸಬೇಕು ಎನ್ನುವುದನ್ನು ವಿವರಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ.ಶಾಂತಲಾ ಬಿ. ಅವರಿಗೆ ರೋಟರಿ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಬಳಿಕ ಮಾತನಾಡಿ, ರೋಟರಿ ಸಂಸ್ಥೆಯವರು ಕಾಲೇಜಿಗೆ ಅನೇಕ ಸಹಾಯನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರೋಟರಿ ಹಾಗೂ ರೋರ‍್ಯಾಕ್ಟ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಅನೇಕ ಕಾರ್ಯಗಳನ್ನು ಅಪೇಕ್ಷಿಸುತ್ತೇವೆ ಎಂದರು.
    ಕಾರ್ಯಕ್ರಮದಲ್ಲಿ ಕಾಲೇಜಿನ ರೋರ‍್ಯಾಕ್ಟ್ ಕೋ- ಆರ್ಡಿನೇಟರ್ ಸಾಗರ ಕಾಂಬ್ಳೆ, ಉಪನ್ಯಾಸಕ ವಿಜಯಕುಮಾರ, ನಿತೇಶಕುಮಾರ, ಸೋವೇಶ, ಫಜಲುದ್ದೀನ್, ರೋಟರಿ ಸಂಸ್ಥೆಯಿಂದ ಪ್ರಸನ್ನ ತೆಂಡೂಲ್ಕರ, ಗೋವಿಂದಪ್ಪ, ವಿನೋದ ಕೊಠಾರಕರ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಕಾಲೇಜಿನ ಅಧ್ಯಾಪಕಿ ಡಾ.ಲಾವಣ್ಯಾ ಹೆಗಡೆ ವಂದಿಸಿದರು. ಕಾರ್ಯಕ್ರಮವನ್ನು ಶೈಲೇಶ ಹಳದೀಪುರ ನಡೆಸಿಕೊಟ್ಟರು. 

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top