Slide
Slide
Slide
previous arrow
next arrow

ಯಶಸ್ವಿಗೊಂಡ ರಂಗ ತರಬೇತಿ ಶಿಬಿರ: ‘ಅಂತರಂಗ-ಬಹಿರಂಗ’ ನಾಟಕ ಪ್ರದರ್ಶನ

300x250 AD

ಶಿರಸಿ: ಸಾಣೇವಳ್ಳಿ ಶ್ರೀ ಶಿವಕುಮಾರ ಕಲಾ ಸಂಘವು ಕನ್ನಡ ಸಂಸ್ಕೃತಿ ಇಲಾಖೆ, ಓಡ್ಡೋಲಗ ಸಿದ್ದಾಪುರ, ಮಾರಿಕಾಂಬ ಗೆಳಯರ ಬಳಗ ಶಿರಸಿ ಅವರ ಸಂಯುಕ್ತಾಶ್ರಯದಲ್ಲಿ ಶಿವ ಸಂಚಾರ ಬೆಳ್ಳಿಹಬ್ಬದ ಪ್ರಯುಕ್ತ ಪ್ರತಿ 31 ಜಿಲ್ಲೆಗೆ ಒಂದು ತಿಂಗಳ ರಂಗ ತರಬೇತಿ ಮತ್ತು ರಂಗ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಶಿಬಿರದ ಸಮಾರೋಪ ಸಮಾರಂಭವು ಮಾರಿಗುಡಿ ಶಾಲೆಯ ಶ್ರೀ ಮಾರಿಕಾಂಬಾ ಸಭಾಮಂಟಪದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಭಾರತಿ ಭಂಡಾರಿ, ಕಲಾವಿದರಿಗೆ ತಿಲಕ ಇಡುವುದರ ಮೂಲಕ ಉದ್ಘಾಟಿಸಿದರು. ಬಸವಣ್ಣನವರ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ವಚನದ ಮಹತ್ವವನ್ನು ತಿಳಿಸಿದರು. ಅಧ್ಯಕ್ಷತೆಯನ್ನು ಗಣಪತಿ ಹಿತ್ಲಕೈ ಮಾತನಾಡಿ, ಸಾಣೇಹಳ್ಳಿಯ ಶಿವ ಸಂಚಾರದ ಕುರಿತಾಗಿ ವಿವರಣೆ ನೀಡಿದರು. ಶಿಬಿರ ನಿದೇರ್ಶಕ ಚಂದ್ರು ಉಡುಪಿರವರು ವಚನ ಸಾಹಿತ್ಯವು ರಂಗ ಮುಖೇನ ಇಂದಿನ ಸಮಾಜಕ್ಕೆ ತಿಳಿಸುವುದು ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು. ಶಿರಸಿಯ ರಂಗಭೂಮಿಯು ಬೆಳೆದು ಬಂದ 300 ವರ್ಷದ ಇತಿಹಾಸವನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಮೋದನ ಆಚಾರಿ ಸಹಕಾರ ನೀಡಿದರು. ನಂತರ ರಂಗದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿದ “ಅಂತರಂಗ-ಬಹಿರಂಗ” ನಾಟಕವನ್ನು ಶ್ರೀ ಮಾರಿಕಾಂಬ ಗೆಳೆಯರ ಬಳಗದ ಕಲಾವಿದರು ಚಂದ್ರು ಉಡುಪಿರವರ ನಿದೇರ್ಶಶನದಲ್ಲಿ ಅಭಿನಯಿಸಿದರು, ಸಂಗೀತ ಸಂಯೋಜನೆ ವಿಶ್ವನಾಥ ಹೀರೆಮಠ ಮತ್ತು ಶ್ರವಣ ಕುಲಕರ್ಣಿ,ಮೋಹನ ಆಚಾರಿಯ ಪ್ರಸಾದನ ಮತ್ತು ರಂಗಪರಿಕರವು ಪ್ರೇಕ್ಷಕರನ್ನು ನಾಟಕದಲ್ಲಿ ತನ್ಮಯಗೊಳಿಸಿತು. ಪ್ರಶಾಂತ ರೇವಣಕರ್ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top