• Slide
  Slide
  Slide
  previous arrow
  next arrow
 • ಸಂಭ್ರಮದಿಂದ ಸಂಪನ್ನಗೊಂಡ ಜ್ಞಾನೇಶ್ವರ ಮಂದಿರದ ಜಾತ್ರೆ

  300x250 AD

  ದಾಂಡೇಲಿ : ನಗರದ ಸೋಮಾನಿ ವೃತ್ತದ ಬಳಿಯಿರುವ ಶ್ರೀ ಸಂತ ಜ್ಞಾನೇಶ್ವರ ಮಂದಿರದ 19 ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು
  ಪಂಡರಾಪುರ ಸದ್ಗುರು ತಾತ್ಯಾಸಾಹೇಬ ಬಾಬಾಸಾಹೇಬ ವಾಸಕರ ಮಹರಾಜ ಇವರ ಕೃಪಾಶೀರ್ವಾದ ಮತ್ತು ದಾಂಡೇಲಿಯ ಅಣ್ಣಾ ಮಹಾರಾಜ ಯಾದವ ಅವರ ಪ್ರೇರಣೆಯಿಂದ ನಡೆದ ಈ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ನಗರ ಹಾಗೂ ನಗರದ ಸುತ್ತಮುತ್ತಲ ಪ್ರದೇಶದಿಂದ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಯ ದರ್ಶನ ಪಡೆದರು. ಮೂರು ದಿನಗಳಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ನೀರಲಗಾದ ನಾಮದೇವ ಶಿಂಧೆ ಮಹಾರಾಜ ಮತ್ತು ವಿಠ್ಠಲ ಕೋಲೆಕರ ಮಹಾರಾಜ ಹಾಗೂ ಸಂಗಡಿಗರಿಂದ ಸತತ ಕೀರ್ತನೆ ಹಾಗೂ ಜಾಗರಣೆ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
  ಜಾತ್ರೋತ್ಸವದ ಕೊನೆಯ ದಿನ ಮುಂಜಾನೆ ಪಲ್ಲಕಿ ಉತ್ಸವ ಹಾಗೂ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು.
  ಜಾತ್ರೋತ್ಸವದ ಯಶಸ್ಸಿಗೆ ಶ್ರೀ ಸಂತ ಜ್ಞಾನೇಶ್ವರ ಮಂದಿರ ಕಮೀಟಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಶ್ರಮಿಸಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top