Slide
Slide
Slide
previous arrow
next arrow

ಯಶಸ್ವಿಗೊಂಡ ‘ಧರ್ಮ ಸಾಮ್ರಾಜ್ಯ’ ನಾಟಕ ಪ್ರದರ್ಶನ

300x250 AD

ಸಿದ್ದಾಪುರ: ಯಾವುದೇ ಪ್ರದರ್ಶನ ಚೆನ್ನಾಗಿ ಮೂಡಿ ಬರಬೇಕೆಂದರೆ  ನಿರ್ದೇಶಕನ ಪಾತ್ರ ಬಹಳ ಮುಖ್ಯ. ಉತ್ತಮ ನಿರ್ದೇಶಕರಿಂದ ಮಾತ್ರ ಕಲಾವಿದರಲ್ಲಿರುವ  ಕಲೆ ಬೆಳಗಲು ಸಾಧ್ಯ ಎಂದು ಸ್ವಸ್ತಿಕ್ ಟ್ರೇಡರ್ಸ್ ಮಾಲೀಕ ರಾಮಚಂದ್ರ ಸುಬ್ರಾಯ ಭಟ್ಟ ಹೇಳಿದರು.
ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ರಂಗ ಸೌಗಂಧ ಏರ್ಪಡಿಸಿದ್ದ ‘ಧರ್ಮ ಸಾಮ್ರಾಜ್ಯ’ ನಾಟಕದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಟಿಎಸ್‌ಎಸ್ ನಿರ್ದೇಶಕ ರಾಮಕೃಷ್ಣ ಹೆಗಡೆ ಅಳಗೊಡು ಮಾತನಾಡಿ, ಇಂದಿನ ಕಾಲದಲ್ಲಿ ನಾಟಕತಂಡ, ಯಕ್ಷಗಾನ ಮೇಳಗಳನ್ನು ಕಟ್ಟಿ ಮುನ್ನಡೆಸುವುದು ಸವಾಲಿನ ಕೆಲಸವಾಗಿದೆ. ಯಕ್ಷಗಾನ, ನಾಟಕಗಳು ಉಳಿದಾಗ ಮಾತ್ರ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಲು ಸಾಧ್ಯ. ಅದಕ್ಕೆ ಅಂತಹ ಕಲಾ ತಂಡಗಳಿಗೆ ನಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ದೇವಾಲಯದ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಸಭೆಯಲ್ಲಿ ಉಪಸ್ಥತರಿದ್ದರು.
ನಂತರ ರಂಗ ಸೌಗಂಧ ತಂಡದವರಿಂದ ದಿ.ಸೀತಾರಾಮ ಶಾಸ್ತ್ರಿ ಹುಲಿಮನೆ ರಚನೆಯ ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದ ‘ಧರ್ಮ ಸಾಮ್ರಾಜ್ಯ’ ನಾಟಕ ಪ್ರದರ್ಶನಗೊಂಡಿತು. ಸಂಗತದಲ್ಲಿ ರಾಜೇಂದ ಕೊಳಗಿ, ಜಯರಾಮ ಭಟ್ಟ ಹೆಗ್ಗಾರಳ್ಳಿ, ಶುಭಾ ರಮೇಶ, ಭೂಮಿಕಾ ಹೆಗಡೆ ಹೊಸಗದ್ದೆ ಸಹಕರಿಸಿದರು.
ಗಣಪತಿ ಹೆಗಡೆ ಗುಂಜಗೋಡು, ರಾಜಾರಾಮ ಭಟ್ಟ ಹೆಗ್ಗಾರಳ್ಳಿ, ರಾಮ ಅಂಕೋಲೇಕರ, ನಾಗಪತಿ ಭಟ್ಟ ವಡ್ಡಿನಗದ್ದೆ, ಶ್ರೀಪಾದ ಹೆಗಡೆ ಕೋಡನಮನೆ, ಅಜಿತ ಭಟ್ಟ ಹೆಗ್ಗಾರಳ್ಳಿ, ಜನಾರ್ಧನ ಭಟ್ಟ ಗೋಕರ್ಣ, ನಂದನ ನಾಯ್ಕ ಅರಶಿನಗೋಡ, ಪ್ರವೀಣಾ ಹೆಗಡೆ ಗುಂಜಗೋಡು, ಜಯಶ್ರೀ ಹೆಗಡೆ ವಡ್ಡಿನಗದ್ದೆ ವಿವಿಧ ಪಾತ್ರ ನಿರ್ವಹಿಸಿ ಮೆಚ್ಚುಗೆ ಗಳಿಸಿದರು.

300x250 AD
Share This
300x250 AD
300x250 AD
300x250 AD
Back to top