• Slide
    Slide
    Slide
    previous arrow
    next arrow
  • ವಿದ್ಯುತ್ ಹರಿದು ಯುವಕನ ದುರ್ಮರಣ: ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬ

    300x250 AD

    ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದಲ್ಲಿ ಬುಧವಾರ ಗದ್ದೆಯಲ್ಲಿ ನೀರು ಹಾಯಿಸಲು ಹೋಗಿದ್ದ ಯುವಕನೊಬ್ಬ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ.

    ಜಿನೇಂದ್ರ ಪಾರ್ಶ್ವನಾಥ್ ಬಸ್ತವಾಡ್ (18) ಎಂಬ ಯುವಕನೇ ದಾರುಣ ಸಾವನ್ನಪ್ಪಿದ ಯುವಕನಾಗಿದ್ದು, ಬುಧವಾರ ತನ್ನ ಗದ್ದೆಯಲ್ಲಿ ಬೋರವೆಲ್ ಶುರು ಮಾಡಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್‌ ತಂತಿ ಹಿಡಿದು ವಿದ್ಯುತ್ ಪ್ರವಹಿಸಿದೆ. ಗಂಭೀರ ಗಾಯಗೊಂಡು ಬಿದ್ದಿದ್ದ ಯುವಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದಾನೆ. ಮುಂಡಗೋಡ ಪೊಲೀಸ್ ಠಾಣಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

    ಸಾವಿನಲ್ಲೂ ಸಾರ್ಥಕತೆ

    300x250 AD

    ಯುವಕ ವಿದ್ಯುತ್ ಅವಘಡದಲ್ಲಿ ಸಾವನ್ನಪ್ಪಿದ ನಂತರ ಆತನ ಕುಟುಂಬದವರು ನೇತ್ರದಾನ ಮಾಡಲು ಶಿರಸಿಯ ಲಯನ್ ನಯನ ನೇತ್ರ ಭಂಡಾರಕ್ಕೆ ಸಂಪರ್ಕಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ನೇತ್ರ ತಂಡದವರು ಯುವಕನ ನೇತ್ರಗಳನ್ನು ಸುರಕ್ಷಿತವಾಗಿ ಪಡೆದುಕೊಂಡು ಹೋಗಿದ್ದಾರೆ. ಮೃತ ಯುವಕನ ಕಂಗಳಿಂದ ದೃಷ್ಟಿಹೀನರಿಗೆ ಬೆಳಕು ಲಭಿಸುವಂತಾಗಿದ್ದು, ಯುವಕನ ಕುಟುಂಬದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top