ದಾಂಡೇಲಿ: ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಕೃಷಿ ಇಲಾಖೆ ಹಳಿಯಾಳ, ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟಿ ಸಂಸ್ಥೆ, ಶ್ರೀಕ್ಷೇತ್ರ ಧ.ಗ್ರಾ ಯೋಜನೆ ಸಂಯುಕ್ತಾಶ್ರಯದಲ್ಲಿ ಆಲೂರಿನ ಕೃಷಿ ಕ್ಷೇತ್ರದ ಸಾಧಕ ಎಚ್.ಬಿ.ಪರಶುರಾಮ ಅವರ ಕೃಷಿ ಜಮೀನಿನಲ್ಲಿ ಜೇನು ಕೃಷಿ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಶಿರಸಿಯ ಡಾ.ಮಧುಕೇಶ್ವರ ಹೆಗಡೆ, ಜೇನು ಕೃಷಿ ಯಾಕೆ, ಹೇಗೆ ಮತ್ತು ಅದರಿಂದಾಗುವ ಲಾಭಗಳನ್ನು ವಿವರಿಸಿ, ರೈತರು ತಮ್ಮ ಕೃಷಿ ಚಟುವಟಿಕೆಯ ಜೊತೆ ಜೊತೆಯಲ್ಲಿ ಜೇನು ಕೃಷಿಯನ್ನು ಮಾಡುವುದರ ಮೂಲಕ ತಮ್ಮ ಆರ್ಥಿಕ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಜಗತ್ತಿನಾಧ್ಯಂತ ಜೇನಿಗೆ ಬೇಡಿಕೆಯಿದ್ದು, ನಾವು ಜೇನಿನ ಮಹತ್ವದ ಬಗ್ಗೆ ಸಂಪೂರ್ಣ ಅರಿವನ್ನು ಹೊಂದಬೇಕೆಂದರು.
ಕೃಷಿ ಸಾಧಕ ಎಚ್.ಬಿ.ಪರಶುರಾಮ ಅವರು ತಮ್ಮ ಜೀವಾನುಭವವನ್ನು ವಿವರಿಸುತ್ತಾ, ಕೃಷಿ ಬದುಕಿನಲ್ಲಿ ಸಿಗುವ ಸಮೃದ್ದ ಹಾಗೂ ಸದೃಢ ಆರೋಗ್ಯದ ಜೊತೆಗೆ ಆತ್ಮತೃಪ್ತಿ ಬೇರೆ ಯಾವ ಕಾರ್ಯದಿಂದಲೂ ಸಿಗಲಾರದು ಎಂದರು.
ಆಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮಣ ಜಾಧವ್, ಉಪಾಧ್ಯಕ್ಷೆ ನೂರು ಜಾನ್ ನಧಪ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಐ.ಮಾನೆ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಎಂ.ನದಾಫ್, ಕೃಷಿ ಅಧಿಕಾರಿ ಸುಧಾಕರ ಮುಳ್ಳೇರ ಮಂತಾದವರಿದ್ದರು.