• first
  second
  third
  Slide
  Slide
  previous arrow
  next arrow
 • ದಿ.ಆಶಾಬಿ ಖಾನ್ ಮನೆಗೆ ಆರ್.ವಿ.ದೇಶಪಾಂಡೆ ಭೇಟಿ

  300x250 AD

  ದಾಂಡೇಲಿ: ಅಂಬೇವಾಡಿಯ ದಿ.ಆಶಾಬಿ ಖಾನ್ ಅವರ ಮನೆಗೆ ಶಾಸಕ ಆರ್.ವಿ.ದೇಶಪಾಂಡೆಯವರು ಮಂಗಳವಾರ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
  ಕಾಂಗ್ರೆಸ್ ಮುಖಂಡರಾದ ರಫೀಕ್ ಖಾನ್ ಅವರ ಮಾತೃಶ್ರೀಯವರಾಗಿದ್ದ ಆಶಾಬಿ ಖಾನ್ ಇತ್ತೀಚೆಗೆ ವಿಧಿವಶರಾಗಿದ್ದರು. ಇದೇ ಸಂದರ್ಭದಲ್ಲಿ ಆರ್.ವಿ.ದೇಶಪಾಂಡೆಯವರು ಮೃತ ಆಶಾಬಿ ಖಾನ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.
  ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ಬ್ಲಾಕ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ವಿ.ಆರ್.ಹೆಗಡೆ, ನಗರಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಮೋಹನ ಹಲವಾಯಿ, ಮಜೀದ್ ಸನದಿ, ಮಹಾದೇವ ಜಮಾದಾರ, ಪಕ್ಷದ ಪ್ರಮುಖರುಗಳಾದ ದಾದಾಪೀರ್ ನದೀಮುಲ್ಲಾ, ಅನಿಲ್ ದಂಡಗಲ್, ಬಸೀರ್ ಗಿರಿಯಾಲ, ಉಸ್ಮಾನ್ ಶೇಖ, ಶಿವಪ್ಪ ನಾಯ್ಕ, ತುಕರಾಮ ಪರಸೋಜಿ, ರಫೀಕ್ ಗಾಂಧಿನಗರ, ಪ್ರತಾಪ್ ಸಿಂಗ್ ರಜಪೂತ್, ದಾವಲಸಾಬ್ ನೀರಲಗಿ, ರವಿ ಚೌವ್ಹಾಣ್, ಪ್ರಭುದಾಸ್ ಎನಿಬೇರಾ, ಕಿರಣ್ ಸಿಂಗ್ ಮೊದಲಾದವರು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Back to top