ಸಿದ್ದಾಪುರ: ಶ್ರೀ ಚಂಡಿಕಾದೇವಿ ಗೆಳೆಯರ ಬಳಗ ಹಾಗೂ ಊರನಾಗರಿಕರ ಸಂಯುಕ್ತ ಆಶ್ರಯದಲ್ಲಿ ದ್ವಿತೀಯ ವರ್ಷದ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ನ.26ರಂದು ತಾಲ್ಲೂಕಿನ ಕರ್ಜಗಿ ಗ್ರಾಮದಲ್ಲಿ ಆಯೋಜಿಸಲಾಗಿದೆ.
ಪಂದ್ಯಾವಳಿಯಲ್ಲಿ 15 ಸಾವಿರ ರೂ. ಪ್ರಥಮ ಬಹುಮಾನ, 10 ಸಾವಿರ ರೂ. ದ್ವಿತೀಯ, 6 ಸಾವಿರ ರೂ. ತೃತೀಯ ಹಾಗೂ 4 ಸಾವಿರ ರೂ. ಚತುರ್ಥ ಬಹುಮಾನ ಹಾಗೂ ಆಕರ್ಷಕ ಟ್ರೋಪಿ ಒಳಗೊಂಡಿದೆ. ಇದರ ಜೊತೆಗೆ ಬೆಸ್ಟ್ ರೈಡರ್, ಕ್ಯಾಚರ್ ಹಾಗೂ ಆಲ್‌ರೌಂಡರ್ ಪ್ರದರ್ಶನ ನೀಡಿದವರಿಗೂ ಬಹುಮಾನ ಇದ್ದು ಪ್ರವೇಶ ಶುಲ್ಕವೂ 800 ರೂ ಆಗಿದೆ. ಅಲ್ಲದೆ ಮಕ್ಕಳಿಗಾಗಿ ಚೋಟಾ ಚಾಂಪಿಯನ್ ಕಬಡ್ಡಿ ಪಂದಾವಳಿ ಕೂಡ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9483171043, 7975877367 ಗೆ ಸಂಪರ್ಕಿಸಬಹುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ. 26ಕ್ಕೆ ಕರ್ಜಗಿಯಲ್ಲಿ ಕಬಡ್ಡಿ ಪಂದ್ಯಾವಳಿ
