ಜೊಯಿಡಾ: ತಾಲೂಕಿನ ಅನಮೋಡ ಉಪ ಕೇಂದ್ರಕ್ಕೆ ಸಂಬಂಧಿಸಿದ 110 ಕೆವಿ ಗೋಪುರಗಳು ಶಿಥಿಲಗೊಂಡಿದ್ದು, ಮುರಿದು ಬೀಳುವ ಸ್ಥಿತಿಯಲ್ಲಿದೆ. ಹೀಗಾಗಿ ಇವುಗಳನ್ನು ತ್ವರಿತವಾಗಿ ಬದಲಾಯಿಸಲು ನ.25 ರಿಂದ ಡಿ.14ರವರೆಗೆ ತಾಲೂಕಿನ ಕ್ಯಾಸಲರಾಕ್, ಅಖೇತಿ, ಬಜಾರಕುಣಂಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದ್ದು, ತಾಲೂಕಿನ ಜನರು ಸಹಕರಿಸುವಂತೆ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ. 25ರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
