Slide
Slide
Slide
previous arrow
next arrow

ನ. 29ಕ್ಕೆ ಕುಳ್ಳೆ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿ

300x250 AD

ಸಿದ್ದಾಪುರ: ತಾಲ್ಲೂಕಿನ ತಂಡಾಗುಂಡಿ ಪಂಚಾಯಿತಿ ವ್ಯಾಪ್ತಿಯ ಶ್ರೀ ಕಾಲೇಶ್ವರ ಗೆಳೆಯರ ಬಳಗ ಕುಳ್ಳೆ-ಹುತ್ಗಾರ್ ಇವರ ಸಂಯುಕ್ತ ಆಶ್ರಯದಲ್ಲಿ ದ್ವಿತೀಯ ವರ್ಷದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ನ.29 ರಂದು ಕುಳ್ಳೆ ಊರಿನ ಕಾಲ್ಲೆಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಪ್ರಥಮ 10 ಸಾವಿರ, ದ್ವಿತೀಯ 6 ಸಾವಿರ, ತೃತೀಯ 4 ಸಾವಿರ ಹಾಗೂ ಚತುರ್ಥ 2 ಸಾವಿರ ಬಹುಮಾನ ಹಾಗೂ ಆಕರ್ಷಕ ಟ್ರೋಪಿಗಳು ಇರಲಿದೆ. 550 ಪ್ರವೇಶ ಶುಲ್ಕ ಇರಲಿದೆ. ಇದಲ್ಲದೆ ಇದೇ ಮೊದಲ ಬಾರಿಗೆ ಹಳೆಯ ಕಬಡ್ಡಿ ಆಟಗಾರರನ್ನು ಪ್ರೋತ್ಸಾಹಿಸುವ ಸಂಬಂಧ 32 ವರ್ಷ ಮೇಲ್ಪಟ್ಟವರಿಗೂ ಪಂದ್ಯಾವಳಿ ಆಯೋಜಿಸಲಾಗಿದೆ. 350 ರೂ. ಪ್ರವೇಶ ಶುಲ್ಕ ಇರಲಿದ್ದು ತಂಡದಲ್ಲಿ ಒಂದೇ ಗ್ರಾಮದ ಆಟಗಾರರು ಇರಬೇಕು. ಇನ್ನು ಮಕ್ಕಳಿಗಾಗಿ ಚೋಟಾ ಚಾಂಪಿಯನ್ ಪಂದ್ಯಗಳು ಕೂಡ ನಡೆಯಲಿದೆ. ಪ್ರತಿ ತಂಡದ ಸದಸ್ಯರು ಒರಿಜನಲ್ ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿದ್ದು ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಶಿರಸಿ ದೇವಿಕೆರೆಯ ಸಾಯಿ ಸ್ಪೋರ್ಟ್ಸ್ನ ದಿನೇಶ ಗೌಡ (ಮೊ.ಸಂ: 9449783404, 6361629928) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top