ಹಳಿಯಾಳ: ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ಸೋಳಾ ಸೋಮವಾರ ವೃತಾಚರಣೆ ಧಾರ್ಮಿಕ ಕಾರ್ಯಕ್ರಮ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಮಠಾಧೀಶರು, ಸ್ವಾಮಿಜಿಗಳ ಸಾನಿಧ್ಯದಲ್ಲಿ ಯಶಸ್ವಿಯಾಗಿ ನೆರವೇರಿತು.
ಮಂಗಳವಾಡ ಗ್ರಾಮದ ಗ್ರಾಮದೇವಿ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಮತ್ತು ಸೋಮವಾರ 2 ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ರುದ್ರಾಭಿಷೇಕ, ಸೋಳಾಸೋಮವಾರ ಗ್ರಂಥ ವಾಚನ, ಮಂಗಳವಾಡ ಸಂತ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಕೀರ್ತನೆ, 16 ದಂಪತಿಗೆ ಉಡಿ ತುಂಬುವ ಕಾರ್ಯಕ್ರಮಗಳು ಜರುಗಿದವು.
ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆ ಕಾದರವಳ್ಳಿಯ ಅದೃಶ್ಯಾನಂದಾಶ್ರಮ, ಸೀಮಿಮಠದ ಶ್ರೀ ಡಾ.ಬಾಳಾಕ್ಷ ಶಿವಯೋಗೀಶ್ವರರು, ಹುಬ್ಬಳ್ಳಿಯ ಜಡಿ ಸಿದ್ದೇಶ್ವರ ಮಠದ ಶ್ರೀ ರಾಮಾನಂದ ಸ್ವಾಮಿಜಿ, ಸೌದತ್ತಿ ಹೂಲಿಮಠದ ಶ್ರೀ ಉಮೇಶ ಅಜ್ಜನವರು, ಮುರ್ಕವಾಡ ಸಿದ್ದಾರೂಢ ಮಠದ ಶ್ರೀ ಮಾಧವಾನಂದ ಸ್ವಾಮಿಜಿ, ಕಿತ್ತೂರಿನ ಸಂಗೋಳ್ಳಿಯ ಶ್ರೀ ಗುರು ಸಿದ್ದಲಿಂಗೇಶ್ವರ ಅಜ್ಜ, ಹುಲಿಕಟ್ಟಿಯ ಶಿವಾನಂದೇಶ್ವರ ಹೂಕೇರಿ ಮಠದ ಶ್ರೀ ಲಿಂಗಾನಂದ ಪ್ರಭುಗಳು, ಕಲಘಟಗಿ ಸೋಮನಕೊಪ್ಪದ ಸಿದ್ದಾರೂಢ ಆಶ್ರಮದ ಶ್ರೀ ನಿಜಗುಣಾನಂದ ಸ್ವಾಮಿಜಿ, ಖಾನಾಪುರ ಹಿಡಕಲ್‌ನ ಅಡವಿ ಸಿದ್ದೇಶ್ವರ ಮಠದ ಶ್ರೀ ದುಂಡಯ್ಯ ಸ್ವಾಮಿಜಿ, ಕಿತ್ತೂರು ದೇಗುಲಹಳ್ಳಿಯ ಶ್ರೀ ವಿರೇಶ್ವರ ಮಹಾಸ್ವಾಮಿಗಳು, ಕಳಸಾಪುರದ ಶಿವಾಜಿ ಮಹಾರಾಜರು ಇತರರು ಉಪಸ್ಥಿತರಿದ್ದರು.
ಸಮಾಜ ಸೇವಕಿ ವೀಣಾ ಕುಂಬಾರ, ಬಾಬು ಕುಂಬಾರ, ರುದ್ರಪ್ಪ ಕೆ, ಬಸವ್ವಾ ಕುಂಬಾರ, ಸಹದೇವ ಕುಂಬಾರ, ಸುಶೀಲಾ ಬಸವರಾಜ ಪೂಜಾರ, ನಿಂಗವ್ವಾ ಕೆ ಕುಟುಂಬಸ್ಥರು ಮತ್ತು ಮಂಗಳವಾಡ ಗ್ರಾಮಸ್ಥರ ಸಹಕಾರದಲ್ಲಿ ಎರಡು ದಿನಗಳ ಕಾಲ ಯಶಸ್ವಿಯಾಗಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಸಾವಿರಾರು ಜನರು ಅನ್ನಪ್ರಸಾದ ಕೂಡ ಸ್ವೀಕರಿಸಿದರು.