Slide
Slide
Slide
previous arrow
next arrow

ಕುಣಬಿಗಳ ಹಕ್ಕಿಗಾಗಿ ಪ್ರಹ್ಲಾದ್ ಜೋಶಿ ಮೂಲಕ ಪ್ರಯತ್ನ: ಶಾಂತಾರಾಮ ಸಿದ್ದಿ

300x250 AD

ಜೊಯಿಡಾ: ರಾಜ್ಯದ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ರಾಜ್ಯ ಸರಕಾರ ಉತ್ತಮ ಕೆಲಸ ಮಾಡಿದೆ. ಕೇಂದ್ರ ಸರಕಾರದ ಮಟ್ಟದಲ್ಲಿ ಸ್ಥಳೀಯ ಎಲ್ಲಾ ಶಾಸಕರು ಮತ್ತು ಸಂಸದರ ಸಹಕಾರದಿಂದ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿರವರ ಮುಖಾಂತರ ಇದಕ್ಕೆ ಪ್ರಯತ್ನ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ಇಲ್ಲಿ ಕುಣಬಿ ಸಮಾಜದ ಪ್ರಮುಖರೊಂದಿಗೆ ಮಾತುಕತೆ ನಡೆಸಿದ ಅವರು, ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ಎಲ್ಲಾ ಗುಣಲಕ್ಷಣ ಹೊಂದಿರುವ ಕುಣಬಿಗಳು ಈ ಕಾಡಿನ ಮಧ್ಯೆ ಸಾಂಸ್ಕೃತಿಕ ಬದುಕು ನಡೆಸುತ್ತಿದ್ದಾರೆ. ಇವರ ಸಂಸ್ಕೃತಿಯ ರಕ್ಷಣೆಯಾದರೆ ಮಾತ್ರ ಕಾಡು, ಪ್ರಾಣಿಗಳು, ಪರಿಸರದ ರಕ್ಷಣೆ ಸಾಧ್ಯವಾಗಲಿದೆ. ಕಳೆದ 30 ವರ್ಷಗಳಿಂದ ಪ್ರಯತ್ನದ ಫಲವಾಗಿ ರಾಜ್ಯ ಸರಕಾರದಿಂದ ಆರ್.ಜಿ.ಐ ನಲ್ಲಿ ಅಧ್ಯಯನ ವರದಿ ಇದೆ. ಕೇಂದ್ರ ಸರಕಾರ ಈ ಕುಣಬಿ ಜನಾಂಗ ಪರಿಶಿಷ್ಟ ಪಂಗಡಕ್ಕೆ ಸೇರುವಂತೆ ಜಿಲ್ಲೆಯ ಮತ್ತು ಬೇರೆ ಜಿಲ್ಲೆಗಳ ಶಾಸಕರು, ಸಂಸದರು ಇದಕ್ಕೆ ಕೈಜೋಡಿಸುವ ಪ್ರಯತ್ನದೊಂದಿಗೆ, ಕೇಂದ್ರ ಸರಕಾರದ ಸಂಸದಿಯ ಮಂತ್ರಿ ಪ್ರಹ್ಲಾದ ಜೋಶಿರವರನ್ನು ನ.27ರಂದು ಶಿವಮೊಗ್ಗದಲ್ಲಿ ಭೇಟಿಯಾಗಲಿದ್ದು, ಹುಬ್ಬಳಿಯಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ಕುಣಬಿ ನಿಯೋಗ ಭೇಟಿಗೆ ಸಮಯ ನಿಗದಿ ಮಾಡುವ ಪ್ರಯತ್ನಿಸಲಾಗುತ್ತದೆ. ಈ ಮೂಲಕ ಎಲ್ಲರೂ ಪ್ರಯತ್ನಿಸೋಣ ಎಂದರು.
ಕುಣಬಿ ಸಮಾಜಕ್ಕೆ ಸುಸಜ್ಜಿತವಾದ ಸಾಂಸ್ಕೃತಿಕ ಭವನ ಮಂಜೂರಿ ಮಾಡುವಂತೆ ಜಿಲ್ಲಾ ಸಮಾಜದಿಂದ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ ಗಾವಡಾ, ಕಾರ್ಯದರ್ಶಿ ಚಂದ್ರಶೇಖರ ಸಾವರಕರ, ಪ್ರಮುಖರಾದ ಸುಭಾಷ ವೇಳಿಪ, ದೇವಿದಾಸ ವೆಳಿಪ, ಪ್ರೇಮಾನಂದ ವೆಳಿಪ, ಪ್ರಭಾಕರ ವೆಳಿಪ, ನಾರಾಯಣ ವೇಳಿಪ, ರಾಮದಾಸ ಗಾವಡಾ, ವಿಷ್ಣು ಬಿರಂಗತ, ಪಾಪು ಗಾವಡೆವಾಡಾ, ಪರಮೇಶ್ವರ ಹನ್ನೋಲಕರ, ದಯಾನಂದ ಕುಮಗಾಳಕರ, ಪಾಂಡುರಂಗ ಗಾವಡಾ ಮುಂತಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top