ಶಿರಸಿ: ತಾಲೂಕಿನ ಬಿಸ್ಲಕೊಪ್ಪದ ಸೂರ್ಯನಾರಾಯಣ ಪ್ರೌಢ ಶಾಲೆಯಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ರವರ “ಹೆಬ್ಬಾರ್ ಡ್ರೀಮ್ ಫೌಂಡೇಶನ್ ಆಫ್ ಚಾರಿಟಿ ” ಮೂಲಕ ಶಾಲೆಯ ಮಕ್ಕಳಿಗೆ ನೀಡಿದ ಉಚಿತ ಪಟ್ಟಿ ವಿತರಣಾ ಸಮಾರಂಭ ನಡೆಯಿತು.
ಸ್ಥಳೀಯ ಸೊಸೈಟಿಯ ಅಧ್ಯಕ್ಷ ಎಸ್.ಎನ್.ಭಟ್ ಅಧ್ಯಕ್ಷತೆ ವಹಿಸಿದ್ದು, ಎಪಿ ಎಮ್.ಸಿ ಅಧ್ಯಕ್ಷ ಪ್ರಶಾಂತ ಗೌಡರ್ ಅತಿಥಿಗಳಾಗಿ ಆಗಮಿಸಿದ್ದರು.
ಸ್ಥಳೀಯ ಮುಖಂಡರಾದ ಬಿ.ಎಸ್.ಗಂಗಾಧರ್, ಗುರುನಾಥ ಕಲ್ಬುರ್ಗಿ, ಮಹೇಂದ್ರ ಭಟ್, ಸುಭಾಷ್ ಮಳಲಗಾವ, ಜಿ.ವಿ. ಭಟ್. ವಿದ್ಯಾ ಸಂಸ್ಥೆ ಕಾರ್ಯದರ್ಶಿಗಳಾದ ಶ್ರೀಧರ ನಾಯಕ ವೇದಿಕೆ ಮೇಲೆ ಇದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಣೇಶ ಭಟ್ ವಾನಳ್ಳಿ ಎಲ್ಲರನ್ನೂ ಸ್ವಾಗತಿಸಿದರು. ಎಲ್ಲಾ ಶಿಕ್ಷಕರು ಮಕ್ಕಳು ಹಾಜರಿದ್ದರು.