ಶಿರಸಿ: ನಗರದ ಪಿಡಬ್ಲ್ಯೂಡಿ ಐಬಿ ಆವರಣದ ಶೆಡ್ ಒಂದರಲ್ಲಿ ನಿಲ್ಲಿಸಲಾಗಿದ್ದ ಅಂಬ್ಯುಲೆನ್ಸ್ನ ವೆಂಟಿಲೇಟರ್ ಮಶಿನ್, ಸಕ್ಷನ್ ಮಶಿನ್ ಹಾಗೂ ಸ್ಟೆಪ್ನಿ ಟಯರ್‌ಗಳನ್ನ ಕದ್ದೊಯ್ದಿದ್ದವನನ್ನ ಪೊಲೀಸರು ಬಂಧಿಸಿದ್ದಾರೆ.
ನ. 4ರಂದು ಈ ಬಗ್ಗೆ ಅಕ್ಷಯ ಶಿರ್ಸಿಕರ್ ದೂರು ನೀಡಿದ್ದರು. ಈ ಬಗ್ಗೆ ಡಿವೈಎಸ್‌ಪಿ ರವಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ, ಪಿಎಸ್‌ಐಗಳಾದ ರಾಜಕುಮಾರ ಉಕ್ಕಲಿ, ರತ್ನಾ ಎಸ್.ಕುರಿ, ಪ್ರೊ.ಅನೂಪ್ ನಾಯಕ, ಸಿಬ್ಬಂದಿ ಪ್ರಶಾಂತ ಪಾವಸ್ಕರ್, ಮಧುಕರ್ ಗಾಂವ್ಕರ್, ನಾಗಪ್ಪ ಲಮಾಣಿ, ಪ್ರವೀಣ, ಅರುಣ ಲಮಾಣಿ, ಸದ್ದಾಂ ಹುಸೇನ್, ರಾಜು ಸಾಲಗಾಂವಿ, ಉದಯ ಗುನಗಾ, ರಮೇಶ ನಾಯ್ಕ ಅವರನ್ನ ಒಳಗೊಂಡ ತಂಡ ಆರೋಪಿ ಸಿರಾಜ್ ಅಹಮದ್‌ನನ್ನ ಬಂಧಿಸಿ 1.5 ಲಕ್ಷ ಮೌಲ್ಯದ ವೆಂಟಿಲೇಟರ್ ಮಶಿನ್, 5000 ಮೌಲ್ಯದ ಸಕ್ಷನ್ ಮಶಿನ್ ಹಾಗೂ 3 ಸಾವಿರ ಮೌಲ್ಯದ ಸ್ಟೆಪ್ನಿ ಟಯರ್ ಜಪ್ತಿಪಡಿಸಿಕೊಂಡಿದ್ದಾರೆ.