• first
  second
  third
  Slide
  Slide
  previous arrow
  next arrow
 • ನ. 29ಕ್ಕೆ ಮುಗ್ವಾದಲ್ಲಿ ಚಂಪಾಷಷ್ಠಿ ಉತ್ಸವ

  300x250 AD

  ಹೊನ್ನಾವರ: ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ದೇವಾಲಯದಲ್ಲಿ ನ.29ರಂದು ಚಂಪಾಷಷ್ಠಿ ಉತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಆರ್.ಹೆಗಡೆ ಮಾಹಿತಿ ನೀಡಿದರು.
  ದೇವಸ್ಥಾನದಲ್ಲಿ ಸೋಮವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯು ಅದ್ದೂರಿಯಾಗಿ ಚಂಪಾಷಷ್ಠಿ ಆಚರಿಸಲಾಗುತ್ತದೆ. 7 ಗಂಟೆಯಿಂದ ರಾತ್ರಿ 8.30ರವರೆಗೆ ದೇವಾಲಯದಲ್ಲಿ ದರ್ಶನ ಹಾಗೂ ಭಕ್ತರಿಗೆ ವಿವಿಧ ಸೇವೆ ಸಲ್ಲಿಸಲು ಅವಕಾಶವಿದೆ. ಮುಂಜಾನೆ 8.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಭಿಷೇಕಗಳು ನಡೆಯಲಿದೆ. ಮಧ್ಯಾಹ್ನ ವಿವಿಧ ಧಾರ್ಮಿಕ ಕಾರ್ಯಕ್ರಮ, ಬಲಿ ಕಾರ್ಯಕ್ರಮ ಹಾಗೂ ಮದ್ಯಾಹ್ನ 3 ಗಂಟೆಯ ಮಹಾಪೂಜೆಯ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.ಒಂದು ಉತ್ಸವ ನಡೆಯಬೇಕೆಂದರೆ ಹತ್ತಾರು ಕುಟುಂಬಗಳು ಸೇರಿ ಒಟ್ಟಾಗಿ ಮಾಡಬೇಕಾಗುತ್ತದೆ. ಕ್ಷೇತ್ರದಲ್ಲಿ ಪಾರಂಪರಿಕವಾಗಿ ಶಾಸ್ತ್ರೋಕ್ತವಾಗಿ ನಡೆದುಕೊಂಡು ಬಂದಂತಹ ಪದ್ಧತಿಗಳು ಯತಾವತ್ತಾಗಿ ನಡೆಯುತ್ತದೆ.ರಾತ್ರಿ ಬಲಿ ಕಾರ್ಯಕ್ರಮಗಳು ನಡೆಯುವ ಕಾರಣ ಮಹಾಪೂಜೆ ನಡೆದು ರಾತ್ರಿ 8:30ರ ನಂತರ ದೇವಾಲಯ ಬಂದ್ ಮಾಡಲಾಗುವುದು. ಭಕ್ತಾದಿಗಳು ಸಹಕರಿಸಿ ಎಂದರು.
  ರಾಜ್ಯದ ವಿವಿಧ ಭಾಗಗಳಿಂದ ಸರಿಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಈ ದಿನ ದೇವಾಲಯಕ್ಕೆ ಆಗಮಿಸುವ ನಿರೀಕ್ಷೆ ಇದೆ. ಭಕ್ತರಿಗೆ ದರ್ಶನ ಸೇರಿದಂತೆ ವಿವಿಧ ಬಗೆಯ ಸೇವೆ ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಹುಲಿಯಪ್ಪನಕಟ್ಟೆಯಿಂದ ದೇವಾಲಯದ ಆವರಣದವರೆಗೂ ಸರತಿ ಸಾಲಿನಲ್ಲಿ ಆಗಮಿಸಬೇಕಿದ್ದು, ಪೆಂಡಾಲ್ ವ್ಯವಸ್ಥೆ ಮಾಡಲಾಗಲಿದೆ. ದೇವರಿಗೆ ಪಾನಕ ಸೇವೆ ಬಳಿಕ ಭಕ್ತರಿಗೆ ವಿತರಿಸಲಾಗುವುದು. ಕುಡಿಯುವ ನೀರು ಹಾಗೂ ವಿವಿಧ ಧಾರ್ಮಿಕ ಸೇವೆ ಸಲ್ಲಿಸಲು ಸೇವಾ ಕೌಂಟರ್ ತೆರೆಯಲಾಗುವುದು. ಸ್ವಯಂ ಸೇವಕರನ್ನು ನೇಮಿಸಲಾಗಿರುತ್ತದೆ,ಸೇವೆ ಕುರಿತಂತೆ ಎನಾದರೂ ಮಾಹಿತಿ ಪಡೆಯಲು ಸಂಪರ್ಕಿಸಬಹುದು.ಮುಂಜಾನೆಯಿಂದ ರಾತ್ರಿ 8:30ರವರೆಗೂ ನಿರಂತರವಾಗಿ ದೇವರ ದರ್ಶನ ಹಾಗೂ ಸೇವೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ದೇವಾಲಯದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು, ಫೆಬ್ರವರಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಕಟ್ಟಡ ನಿರ್ಮಾಣ, ಬಂಗಾರದ ಕಳಸ, ಬಂಗಾರದ ಕವಚ, ಬೆಳ್ಳಿ ಪಲ್ಲಕ್ಕಿ ಇದೇ ವೇಳೆ ಸಮರ್ಪಣೆ ನಡೆಯಲಿದೆ. ಈ ಕಾರ್ಯಕ್ಕೆ ಭಕ್ತರು ಈ ಸೇವಾ ಕಾರ್ಯದಲ್ಲಿಯೂ ಪಾಲ್ಗೊಳ್ಳಬಹುದು ಎಂದರು.
  ಇದೇ ವೇಳೆ ಕಾರ್ಯದರ್ಶಿ ಎನ್.ಎಂ.ಭಟ್, ಆಡಳಿತಮಂಡಳಿ ಸದಸ್ಯರಾದ ಕೃಷ್ಣಮೂರ್ತಿ ಹೆಗಡೆ, ಎಸ್.ಜಿ.ಹೆಗಡೆ, ಎನ್.ಎಂ.ಹೆಗಡೆ, ಎಸ್.ಆರ್.ಭಟ್ ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top