ಕಾರವಾರ: ನ.21ರಂದು ವಿಶ್ವ ಮೀನುಗಾರಿಕೆ ದಿನದ ನಿಮಿತ್ತ ನಗರದಲ್ಲಿ ಇದೇ ಮೊದಲ ಬಾರಿಗೆ ಆಚರಣೆಗೆ ಮುಂದಾಗಲಾಗಿದೆ.
ಅಂದು ನಗರದಲ್ಲಿ ಮೀನುಗಾರರ ಸಮುದಾಯದವರು ಸೇರಿ ಬೃಹತ್ ಮೆರವಣಿಗೆ ನಡೆಸಲಿದ್ದಾರಲ್ಲದೇ ಮೀನುಗಾರಿಕೆ ವೃತ್ತಿ ಬಿಂಬಿಸುವ ಟ್ಯಾಬ್ಲೋ ಪ್ರದರ್ಶನವಿದೆ. ಅಲ್ಲದೇ ಮೀನು ವ್ಯಾಪಾರ ಬಂದ್ ಮಾಡಿ ಮಹಿಳೆಯರು ಮತ್ತು ಮೀನುಗಾರ ಸಂಘಟನೆಯವರು, ಸಮಾಜದ ಪ್ರಮುಖರು ಮೀನುಗಾರಿಕೆ ದಿನಾಚರಣೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಕೋಡಿಬೀರ ದೇವಾಲಯದ ಆವರಣದಿಂದ ಬೃಹತ್ ಮೆರವಣಿಗೆ ಹೊರಡಲಿದೆ. ಕಾರ್ಯಕ್ರಮಕ್ಕೆ ಮೀನುಗಾರರ ಹಲವು ಸಂಘಟನೆಗಳು ಕೈ ಜೋಡಿಸಲಿವೆ ಎಂದು ಉತ್ತರ ಕನ್ನಡ ಮೀನುಗಾರರ ಮಹಿಳಾ ಅಭಿವೃದ್ಧಿ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.