Slide
Slide
Slide
previous arrow
next arrow

ಹುಳಗೋಳ ಸೊಸೈಟಿಯಲ್ಲಿ 69 ನೇ ಸಹಕಾರಿ ಸಪ್ತಾಹ: ಸಹಕಾರಿ ತರಬೇತಿ, ಹಿರಿಯ ಸದಸ್ಯರಿಗೆ ಸನ್ಮಾನ

300x250 AD

ಶಿರಸಿ: 69ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಹುಳಗೋಳ ಸೇವಾ ಸಹಕಾರಿ ಸಂಘದ ಸಹಕಾರಿ ಸಭಾಭವನದಲ್ಲಿ ನ.19, ಶನಿವಾರದಂದು ಸಹಕಾರಿ ತರಬೇತಿ ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಹಿರಿಯ ನಿರ್ದೇಶಕರು, ಟಿಎಂಎಸ್ ಶಿರಸಿ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣದ ಮೂಲಕ ಇಳುವರಿ ಹಾಗೂ ಆದಾಯ ಹೆಚ್ಚಿಸಿಕೊಳ್ಳುವಂತೆ ಸದಸ್ಯರಿಗೆ ಸಲಹೆ ನೀಡಿದರು. ಅಥಿತಿಗಳಾಗಿ ಉಪಸ್ಥಿತರಿದ್ದ ಶಿರಸಿ ವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಟಿ.ವಿ.ಶ್ರೀನಿವಾಸ ಅಡಿಕೆ ಜೊತೆಗೆ ಸಂಘದಿಂದ ಹಣಕಾಸಿನ ನೆರವು ಪಡೆದು ವಿವಿಧ ಉಪ ಉತ್ಪನ್ನಗಳ ಉದ್ದಿಮೆ ಸ್ಥಾಪಿಸಿ ಸ್ವಾವಲಂಬಿಗಳಾಗಲು ರೈತರಿಗೆ ತಿಳಿಸಿದರು.
ನಂತರ ಜರುಗಿದ ಸಹಕಾರಿ ತರಬೇತಿ ಕಾರ್ಯಕ್ರಮದಲ್ಲಿ ಸಹಕಾರಿ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ.ಕೆ. ರಾಮಪ್ಪ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕಾರಿ ಸಂಘಗಳ ಆಡಳಿತದಲ್ಲಿ ಸದಸ್ಯರ ಮತ್ತು ಆಡಳಿತ ಮಂಡಳಿಯ ಹಕ್ಕು ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಸಂಘದ ಹಿರಿಯ ಪ್ರಾಮಾಣಿಕ ನಿಷ್ಠಾವಂತ ಸದಸ್ಯ ಗಜಾನನ ವೆಂಕಟ್ರಮಣ ಹೆಗಡೆ ಗುಂಡಿಗದ್ದೆ, ನಾಗಪತಿ ಗಣಪತಿ ಹೆಗಡೆ ಕಾರಗದ್ದೆ, ವೆಂಕಟ್ರಮಣ ಸುಬ್ರಾಯ ಹೆಗಡೆ ಕುಂಬ್ರೀಗದ್ದೆ, ಅನಂತ ನರಸಿಂಹ ಭಟ್ಟ ಅಗಸಾಲ, ಶಿವಸಾಂಬ ನಾರಾಯಣ ಹೆಗಡೆ ತಾರಗೋಡ, ಶ್ರೀಮತಿ ಭಾಗೀರಥಿ ಗೋಪಾಲಕೃಷ್ಣ ಹೆಗಡೆ ಬೊಮ್ನಳ್ಳಿ ಮತ್ತು ಶ್ರೀಮತಿ ಪಾರ್ವತಿ ನೇಯು ಗೌಡ ದೊಡ್ಡಬೈಲ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿ.ಎಸ್. ಹೆಗಡೆ ಕೆಶಿನ್ಮನೆ ವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಗಣಪತಿ ಎಂ. ಹೆಗಡೆ ಮಾತ್ನಳ್ಳಿ ಇವರು ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಶಿಕಾಂತ ಹೆಗಡೆ ತಾರಗೋಡ ಹಾಗೂ ಪ್ರಸನ್ನ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಅಂತಿಮವಾಗಿ ಸಂಘದ ಉಪಾಧ್ಯಕ್ಷ ಆರ್.ಎಸ್.ಭಟ್ಟ ನಿಡಗೋಡ ಎಲ್ಲರಿಗೂ ವಂದಿಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.

300x250 AD
Share This
300x250 AD
300x250 AD
300x250 AD
Back to top