ಮುಂಬಯಿ: ಇತ್ತೀಚೆಗೆ ಮುಂಬಯಿನಲ್ಲಿ ಹಿಂದೂದ್ವೇಷಿ ಹಾಸ್ಯ ಕಲಾವಿದ ವೀರ ದಾಸ ಮತ್ತು ಮುನವ್ವರ್ ಫಾರೂಕಿ ಅವರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಎರಡೂ ಕಾರ್ಯಕ್ರಮಗಳನ್ನು ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಒಟ್ಟಾಗಿ ವಿರೋಧಿಸಿದರು. ಪರಿಣಾಮ ವೀರ ದಾಸ ಮತ್ತು ಮುನವ್ವರ್ ಫಾರೂಕಿ ಇವರಿಗೆ ಮುಂಬಯಿಂದ ಹಿಂತಿರುಗಿ ಹೋಗಬೇಕಾಯಿತು. ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗೌರವಿಸಿ ಪೊಲೀಸ್ ಆಡಳಿತ ಮತ್ತು ಆಯೋಜಕರು ಈ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ಹಿಂದೂ ಜನಜಾಗೃತಿ ಸಮಿತಿಗೆ ತಿಳಿಸಿದ್ದಾರೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ರಾಜ್ಯ ಸಂಘಟಕ ಸುನೀಲ ಘನವಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘನವಟ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ‘ಹಾಸ್ಯ’ದ ಹೆಸರಿನಲ್ಲಿ ನಿರಂತರವಾಗಿ ಹಿಂದೂ ದೇವತೆಗಳು ಮತ್ತು ಶ್ರದ್ಧಾಸ್ಥಾನಗಳ ಅವಹೇಳನೆ ಮಾಡುವುದು ಇತ್ತಿಚಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕಲೆಯ ಸ್ವಾತಂತ್ರ್ಯ ಎಂದು ಕರೆಯಲಾಗುತ್ತದೆ. ಇದೇ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕಲಾ ಸ್ವಾತಂತ್ರ್ಯದ ಬುರಖಾ ತೊಟ್ಟು ಹಿಂದೂದ್ವೇಷವನ್ನು ಹಬ್ಬಿಸಲಿಕ್ಕಿರುತ್ತದೆ, ಎಂಬುದೇ ಇದರಿಂದ ಗಮನಕ್ಕೆ ಬರುತ್ತದೆ. ಹಾಸ್ಯ ಮಾಡುತ್ತಾ ಸಮಾಜವನ್ನು ನಗಿಸಲು ಅದರಲ್ಲೂ ಹಿಂದೂ ಧರ್ಮದಲ್ಲಿನ ಆಚಾರ-ವಿಚಾರ, ಸಂಪ್ರದಾಯ, ಹಿಂದೂ ಸಂಸ್ಕೃತಿ, ಧಾರ್ಮಿಕ ಕೃತಿ, ಧರ್ಮಗ್ರಂಥಗಳು, ದೇವತೆಗಳು ಇತ್ಯಾದಿಗಳನ್ನು ‘ಹಾಸ್ಯ’ಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇತರ ಧರ್ಮಗಳ ಶ್ರದ್ಧಾಸ್ಥಾನಗಳ ಬಗ್ಗೆ ಯಾರಾದರೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದರೆ, ಅವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಲಾಗುತ್ತದೆ, ‘ಸರ್ ತನ್ ಸೆ ಜುದಾ’ದ ಬೆದರಿಕೆಗಳನ್ನು ನೀಡಲಾಗುತ್ತದೆ; ಆದರೆ ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಯಾರೂ ಗೇಲಿ ಮಾಡುತ್ತಾರೆ. ಇದನ್ನು ಹಿಂದೂಗಳು ಎಷ್ಟು ದಿನ ಸಹಿಸಿಕೊಳ್ಳಬೇಕು ? ಇನ್ನು ಮುಂದೆ ಹಿಂದೂ ಸಮಾಜದ ಶ್ರದ್ಧಾಸ್ಥಾನಗಳ ಅವಮಾನ ಮಾಡುವುದನ್ನು ಸಹಿಸುವುದಿಲ್ಲ ಎಂದು ಹೇಳಿದರು.