Slide
Slide
Slide
previous arrow
next arrow

ಸ್ಕಿಲ್ ಕನೆಕ್ಟ್ನಲ್ಲಿ ನೋಂದಾವಣೆಗೆ ಅವಕಾಶ

300x250 AD

ಕಾರವಾರ: ರಾಜ್ಯ ಸರ್ಕಾರವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಯುವಜನತೆಗೆ ಕೌಶಲ್ಯ ಉದ್ಯಮಶೀಲತೆ ಮತ್ತು ಉದ್ಯೋಗವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸ್ಕಿಲ್ ಕನೆಕ್ಟ್ ಎಂಬ ಹೊಸ ವೆಬ್ ಪೋರ್ಟಲ್‌ನ್ನು ಅನಾವರಣಗೊಳಿಸಿದೆ.
ಈ ವೆಬ್ ಪೋರ್ಟಲ್‌ನಲ್ಲಿ ಈಗಾಗಲೇ 25000ಕ್ಕೂ ಹೆಚ್ಚು ಉದ್ಯೋಗವಕಾಶಗಳು ಹಾಗೂ ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ಕಂಪನಿಗಳು ನೋಂದಣಿಯಾಗಿರುತ್ತವೆ. ವೆಬ್ ಪೋರ್ಟಲ್‌ನಲ್ಲಿ ನೋಂದಣಿಯಾಗಿರುವ ಕಂಪನಿಗಳು ಅಭ್ಯರ್ಥಿಗಳ ಬಾಯೋಡಾಟಾವನ್ನು ಪರಿಶೀಲಿಸಿ ಉದ್ಯೋಗಕ್ಕೆ ಪರಿಗಣಿಸುವುದರಿಂದ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಹಾಗೂ ಅನುಭವವನ್ನು http://www.skillconnect.kaushalkar.com ನಲ್ಲಿ ನೋಂದಾಯಿಸಿಕೊ0ಡು ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಛೇರಿ ಅಥವಾ ದೂರವಾಣಿ ಸಂಖ್ಯೆ: 9975633671 ಅಥವಾ 8861911982 ಅವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top