Slide
Slide
Slide
previous arrow
next arrow

ನ. 20ಕ್ಕೆ ‘ಸ್ವರ ಸಂಗಮ’ ವಾರ್ಷಿಕೋತ್ಸವ ಸಮಾರಂಭ

300x250 AD

ಶಿರಸಿ ತಾಲೂಕಿನ ಹುತ್ಗಾರಿನಲ್ಲಿ ನ. 20, ರವಿವಾರ ಬೆಳಿಗ್ಗೆ 10 ಗಂಟೆಯಿಂದ ‘ಸ್ವರ ಸಂಗಮ’ ಸಂಗೀತ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ.

 ಕಾರ್ಯಕ್ರಮದಲ್ಲಿ ಕಲಾವಿದರ ಸಂಗಮವೇ ನಡೆಯಲಿದ್ದು ಗಾಯನದಲ್ಲಿ ನಾಗಭೂಷಣ್ ಹೆಗಡೆ ಬಾಳೆಹದ್ದ, ತಬಲಾ ವಾದನದಲ್ಲಿ ನಿತಿನ್ ಹೆಗಡೆ ಕಲಗದ್ದೆ, ಸಂತೂರ್ ಹಾಗೂ ಬಾನ್ಸೂರಿ ಜುಗಲ್ ಬಂದಿಯಲ್ಲಿ ಶ್ರೀಮತಿ ಸುಮಾ ಹೆಗಡೆ ಹಾಗೂ ಗುರುಪ್ರಸಾದ್ ಹೆಗಡೆ ನೆಟಗಾರ ಆಗಮಿಸಲಿದ್ದಾರೆ.

 ಸಹಕಲಾವಿದರಾಗಿ ತಬಲಾದಲ್ಲಿ ಗಣೇಶ್ ಗುಂಟ್ಕಲ್, ನಿತಿನ್ ಹೆಗಡೆ, ಹಾರ್ಮೋನಿಯಂನಲ್ಲಿ ಅಜಯ್ ಹೆಗಡೆ ಬೆಣ್ಣೆಮನೆ, ಲೆಹೆರಾದಲ್ಲಿ ಡಾ. ಸಮೀರ್ ಭಾದ್ರಿ ಸಾಥ್ ನೀಡಲಿದ್ದಾರೆ.

300x250 AD

 ಕಾರ್ಯಕ್ರಮದಲ್ಲಿ ಸ್ವರಸಂಗಮ ಸಂಗೀತ ಶಾಲಾ ವಿದ್ಯಾರ್ಥಿಗಳಿಂದಲೂ ಸಂಗೀತ ಕಾರ್ಯಕ್ರಮವು ನಡೆಯಲಿದೆ. ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಕಾರ್ಯಕ್ರಮ ಚಂದಗಾಣಿಸಿಕೊಡಲು ಸಂಗೀತ ಶಾಲೆಯ ಶಿಕ್ಷಕ ದಿನೇಶ್ ಹೆಗಡೆ ಗಿಳಿಗುಂಡಿ ಪ್ರಕಟಣೆಯಲ್ಲಿ ಕೋರಿದ್ದಾರೆ.

Share This
300x250 AD
300x250 AD
300x250 AD
Back to top