Slide
Slide
Slide
previous arrow
next arrow

ಸದೃಢ ರೈತರಿದ್ದರೆ ಮಾತ್ರ ಸಂಘ ಸಂಸ್ಥೆಗಳು ಸುಸ್ಥಿರವಾಗಿರಲು ಸಾಧ್ಯ: ಆರ್. ಮಂಜುನಾಥ

300x250 AD

ಶಿರಸಿ: ಸಹಕಾರಿ ಸಂಸ್ಥೆಗಳು ಎಷ್ಟೇ ಸಧೃಡವಾಗಿಯೂ ಸುಸ್ತಿರವಾಗಿ ಇದ್ದರೂ, ಅದರ ಸಂಸ್ಥೆಯ ಸದಸ್ಯರು ಸಧೃಡವಾಗಿರುವುದೇ ಮುಖ್ಯವಾಗಿರುತ್ತದೆ. ಈ ದೃಷ್ಟಿಯಿಂದ ಮುಂಡಗನಮನೆ ಸೊಸೈಟಿಯು ರೈತ ಸದಸ್ಯರಿಗಾಗಿ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಿ ಎಲ್ಲಾ ರೈತರ ಆರೋಗ್ಯದ ಬಗ್ಗೆ ಕಾಳಜಿವಹಿಸುತ್ತಿದೆ ಎಂದು ಉತ್ತರಕನ್ನಡ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಆರ್. ಮಂಜುನಾಥ ಹೇಳಿದರು.

ಅವರು ನ. 17ರಂದು ಮುಂಡಗನಮನೆ ಸೊಸೈಟಿಯ ದೇವನಳ್ಳಿ ಶಾಖೆಯಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಹಾಗೂ ರಕ್ತದಾನ, ವರ್ಗೀಕರಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ನಾನು ಈ ಜಿಲ್ಲೆಗೆ ಅಧಿಕಾರಿಯಾಗಿ ಬಂದ ಈ ಸ್ವಲ್ಪ ಅವಧಿಯಲ್ಲಿಯೇ ಇಲ್ಲಿ ಉತ್ತಮ ಸಹಕಾರಿ ಸಂಘಗಳು ಇವೆ ಎಂದು ತಿಳಿದುಕೊಂಡಿದ್ದೇನೆ. ಮುಂಡಗನಮನೆ ಸೇವಾ ಸಹಕಾರಿ ಸಂಘ ನಡೆಸುತ್ತಿರುವ ಇಂತಹ ರೈತಪರ ಕಾರ್ಯಕ್ರಮಗಳು ಎಲ್ಲಾ ಸಹಕಾರಿಗಳಿಗೂ ಮಾದರಿ ಆಗಲಿ ಎಂದರು.
ಕಾರ್ಯಕ್ರಮದ ಅತಿಥಿಗಳಾದ ಶಿರಸಿ ಟಿ.ಎಸ್.ಎಸ್. ಪ್ಯಾರಾಮೆಡಿಕಲ್ಸ್ ಪ್ರಾಂಶುಪಾಲರ ಡಾ. ಪಿ.ಎಸ್. ಹೆಗಡೆ ಮಾತನಾಡಿ ರೋಗ ಬಂದು ಅದನ್ನು ಗುಣಪಡಿಸುವುದಕ್ಕಿಂತ ರೋಗ ಬರದಂತೆ ಮುಂಜಾಗೃತ ಕ್ರಮವನ್ನು ತೆಗೆದುಕೊಳ್ಳುವುದು ಉತ್ತಮ. ಅದೇ ರೀತಿ ಕ್ಯಾನ್ಸರ್ ಬರದಂತೆ ಜಾಗೃತಿ ಶಿಬಿರವನ್ನು ನಡೆಸಲಾಗುತ್ತಿದೆ ಎಂದರು.
ಹುಬ್ಬಳ್ಳಿ ಹೆಚ್.ಸಿ.ಜಿ.ಎನ್.ಎಮ್.ಆರ್ ಕ್ಯೂರ್ ಸೆಂಟರ್‌ನ ಡಾ ಬಸವರಾಜ ಮಾತನಾಡಿ ಕ್ಯಾನ್ಸರ್ ರೋಗ ಎಷ್ಟು ಬಗೆಯಲ್ಲಿ ಇವೆ, ಅವು ಯಾವವು, ಮಹಿಳೆಯರಿಗೆ ನಾನಾ ರೀತಿ ರೋಗ ಬರುತ್ತಿವೆ, ಇವುಗಳನ್ನು ತಡೆಗಟ್ಟುವ ಕ್ರಮ ಹೇಗಿದೆೆ ಎಂದು ತಿಳಿಸಿದರು. ಹಾಗೂ ಕ್ಯಾನ್ಸರ್ ರೋಗವು ಗುಣಮಾಡಬಹುದಂತಹ ರೋಗವಾಗಿದೆ. ಇದಕ್ಕೆ ಸಾಕಷ್ಟು ಸಂಶೋದನೆಗಳು ಆಗಿವೆ ಎಂದರು.
69ನೇ ಸಹಕಾರಿ ಸಪ್ತಾಹದ ಅಂಗವಾಗಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ನಾವು ರೈತರ ಆರೋಗ್ಯದ ದೃಷ್ಟಿಯಿಂದ ಬಹಳ ವರ್ಷಗಳಿಂದ ಈ ಆರೋಗ್ಯ ಶಿಬಿರವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಇತ್ತೀಚೆಗೆ ಕ್ಯಾನ್ಸರ್ ರೋಗ ಹೆಚ್ಚೆಚ್ಚು ಕಾಣಿಸುತ್ತಿರುವುದರಿಂದ ಈ ರೋಗದ ಬಗ್ಗೆ ಜಾಗೃತಿ ಶಿಬಿರವನ್ನು ನಡೆಸುತ್ತಿದ್ದೇವೆ ಎಂದರು. ನಮ್ಮ ಸಂಘವು ಭೌಗೋಳಿಕವಾಗಿ ಹೆಚ್ಚಿನ ಭೂಪ್ರದೇಶವನ್ನು ಹೆಚ್ಚು ಹೊಂದಿದ್ದಾಗ್ಯೂ ಹೆಚ್ಚಿನ ಪ್ರದೇಶ ಗುಡ್ಡ ಹಾಗೂ ಕಾಡುಗಳನ್ನೇ ಹೊಂದಿವೆ. ರೈತರ ಸಂಖ್ಯೆ ಕಡಿಮೆ ಇದ್ದಾಗ್ಯೂ ಪ್ರತಿಶತ 90ಕ್ಕಿಂತ ಹೆಚ್ಚಿನ ರೈತರು ನಮ್ಮ ಸಂಘದ ಸದಸ್ಯರಾಗಿದ್ದಾರೆ. ಈ ಎಲ್ಲಾ ರೈತ ಸದಸ್ಯರ ಅನುಕೂಲಕ್ಕಾಗಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಕೈಗೊಂಡಿದ್ದೇವೆ. ಮೂರು ಶಾಖೆಗಳನ್ನು ಹೊಂದಿದ್ದೇವೆ. ಅವರ ಅನುಕೂಲಕ್ಕಾಗಿ ವಾರದ ಏಳು ದಿನಗಳೂ ನಮ್ಮ ಶಾಖೆಗಳು ತೆರೆದಿರುತ್ತವೆ. ಹಾಗೆಯೇ ನಮ್ಮ ರೈತರ ಕಷ್ಟಕ್ಕಾಗಿ ಕೆಲವು ಸಾರಿ ಅವರ ಉತ್ಪನ್ನಕ್ಕೂ ಮೀರಿಯೂ ಸಾಲ ಕೊಡುವ ಸಂದರ್ಭಗಳಲ್ಲಿ ನಾವು ಹಿಂದಡಿ ಇಟ್ಟಿಲ್ಲ ಎಂದರು. ಅಲ್ಲದೇ ಘನರಾಜ್ಯ ಸರಕಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಪುನಃ ಜಾರಿಯಲ್ಲಿ ತಂದಿದೆ. ಇದರ ಪ್ರಯೋಜನವನ್ನು ಎಲ್ಲಾ ಸದಸ್ಯರು ಪಡೆಯಬೇಕೆಂದರು.

300x250 AD

ವೇದಿಕೆಯಲ್ಲಿ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಸುಬ್ರಮಣ್ಯ ಡಿ. ವಿಶ್ವಾಮಿತ್ರ ಉಪಸ್ಥಿತರಿದ್ದರು. ಸಭೆಯ ಪ್ರಾರಂಭಕ್ಕೆ ಸಂಘದ ಸಿಬ್ಬಂದಿ ನಿತ್ಯಾನಂದ ಭಟ್ಟರು ಪ್ರಾರ್ಥಿಸಿದರು. ಸಂಘದ ಮಾರುಕಟ್ಟೆ ಸಲಹೆಗಾರ ವಿ.ಆರ್. ಹೆಗಡೆ ಮತ್ತಿಘಟ್ಟಾ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಾಹಕ ನಾಗಪತಿ ಭಟ್ಟ ಕಾರ್ಯಕ್ರಮ ನಿರ್ವಹಿಸಿ ಆಭಾರ ಮನ್ನಣೆಗೈದರು. ಸಂಘದ ಎಲ್ಲಾ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದು 69ನೇ ಸಹಕಾರಿ ಸಪ್ತಾಹವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಟಿ.ಎಸ್.ಎಸ್. ಆಸ್ಪತ್ರೆ ಸಿಬ್ಬಂದಿಗಳ ಸೇವೆ, ಹೆಗಡೆಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ದೇವನಳ್ಳಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಸಹಕಾರದಿಂದ ಆರೋಗ್ಯ ಶಿಬಿರ ಯಶಸ್ವಿಯಾಯಿತು.

Share This
300x250 AD
300x250 AD
300x250 AD
Back to top