Slide
Slide
Slide
previous arrow
next arrow

ರೂಪಾಲಿ ಕಾರ್ಯಕ್ಕೆ ಶ್ಲಾಘನೆ: ಮತ್ತೆ ಶಾಸಕಿಯನ್ನಾಗಿ ಮಾಡುವಂತೆ ಸಚಿವ ಮಾಧುಸ್ವಾಮಿ ಮನವಿ

300x250 AD

ಕಾರವಾರ: ಕ್ಷೇತ್ರದಲ್ಲಿನ ಯೋಜನೆಗಳಿಗೆ, ಜನತೆಗೆ ಅನುಕೂಲ ಕಲ್ಪಿಸಲು ಸರ್ಕಾರದಿಂದ ಹಣ ತರುವಲ್ಲಿ ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಮುಂದಿದ್ದಾರೆ. ಅವರು ಕೆಲಸ ಮಾಡುತ್ತಾರೆ. ಜನತೆಗೆ ಬೇಕಾಗಿರುವುದನ್ನು ಮಾಡುತ್ತಾರೆ. ಅಭಿವೃದ್ಧಿಯ ಆಸೆ, ಕನಸುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಸಫಲರಾಗಿದ್ದಾರೆ ಎಂದು ರೂಪಾಲಿ ನಾಯ್ಕ ಅವರನ್ನು ಪ್ರಶಂಸಿಸಿದ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ಮುಂದಿನ ಬಾರಿಯೂ ರೂಪಾಲಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ತಾಲ್ಲೂಕಿನ ಕಣಸಗಿರಿಯಲ್ಲಿ ಗುರುವಾರ ಸಣ್ಣ ನೀರಾವರಿ ಇಲಾಖೆಯಿಂದ 12 ಕೋಟಿ ರೂ. ವೆಚ್ಚದ ಖಾರಲ್ಯಾಂಡ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದ ಅವರು, ಖಾರಲ್ಯಾಂಡ್ ಕಾಮಗಾರಿಗೆ ಅನುದಾನ ನೀಡುವಂತೆ ರೂಪಾಲಿ ನಾಯ್ಕ ಒತ್ತಡ ಹೇರಿದರು. ಈ ಕಾಮಗಾರಿ ಶಿಲಾನ್ಯಾಸದಿಂದ ಅವರಿಗೂ ಸಮಾಧಾನ ಆಗಿದೆ. ಅವರನ್ನು ಮತ್ತೆ ಗೆಲ್ಲಿಸುತ್ತೀರಿ ಎಂಬ ಭರವಸೆ ಇದೆ. ಬರಿ ರಾಜಕೀಯ ಮಾಡುವವರಿಗಿಂತ ಅಭಿವೃದ್ಧಿ ಪರವಾಗಿರುವ ರೂಪಾಲಿ ವಿಶೇಷ. ಅವರು ಮುಖ್ಯಮಂತ್ರಿಗಳ ಎದುರು ಅರ್ಜಿ ಹಿಡಿದು ಹೋದರೆ ತಕ್ಷಣ ಸಹಿ ಬೀಳುತ್ತದೆ. ಎಲ್ಲ ಇಲಾಖೆಗಳಿಂದಲೂ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುವಲ್ಲಿ ಸಫಲರಾಗಿದ್ದಾರೆ. ಈ ಕ್ಷೇತ್ರದ ಜನರು ಒಳ್ಳೆಯ ಶಾಸಕರನ್ನೇ ಆಯ್ಕೆ ಮಾಡಿದ್ದಾರೆ. ಮುಂದೆಯೂ ರೂಪಾಲಿ ಅವರಿಗೆ ಅವಕಾಶ ನೀಡಿ, ನಿಮ್ಮ ಆಶೀರ್ವಾದ, ಸಹಕಾರ ಇರಲಿ ಎಂದು ಜನತೆಯನ್ನು ಕೋರಿದರು.
ಶಾಸಕಿ ರೂಪಾಲಿ ಎಸ್.ನಾಯ್ಕ ಮಾತನಾಡಿ, ಉಪ್ಪು ನೀರಿನಿಂದ ಹೊಲ, ಗದ್ದೆಗಳಲ್ಲಿ ನುಗ್ಗಿ ಕೃಷಿ ಮಾಡಲು ರೈತರಿಗೆ ಸಾಧ್ಯವಾಗುತ್ತಿರಲಿಲ್ಲ . ಬಾವಿಗಳ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಖಾರ್ಲ್ಯಾಂಡ ಬಂಡ್ ನಿರ್ಮಾಣದಿಂದ ಮುಂದಿನ ದಿನಗಳಲ್ಲಿ ಈ ಭೂಮಿ ಕೃಷಿಗೆ ಯೋಗ್ಯವಾಗಲಿದೆ. ಬಾವಿಗಳಲ್ಲಿ ಕುಡಿಯುವ ನೀರು ಸಿಗಲಿದೆ. ಹಿಂದೆ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ನಾವು ಈ ಖಾರ್ಲ್ಯಾಂಡ ಪದವನ್ನು ಕೇಳಿದ್ದೇವು. ಅವರ ಅಧಿಕಾರಾವಧಿಯಿಂದ ಇಲ್ಲಿಯವರೆಗೆ ಇಂತಹ ಖಾರಲ್ಯಾಂಡ್ ಕಾಮಗಾರಿಗಳು ಆಗಿರಲಿಲ್ಲ. ಯಾವ ಶಾಸಕರೂ ಈ ಬಗ್ಗೆ ಗಮನವೂ ವಹಿಸಿರಲಿಲ್ಲ. ಉಪ್ಪು ನೀರು ಹೊಲ ಗದ್ದೆಗಳಿಗೆ ಹೋಗುವುದರಿಂದ ರೈತರಿಗೆ ಆಗುತ್ತಿರುವ ತೊಂದರೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದೆ. ಮನವಿಯಿಂದ ಸರ್ಕಾರ ಖಾರಲ್ಯಾಂಡ್ ಕಾಮಗಾರಿಗೆ 100 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಮೂಲೆಮೂಲೆಗು ತಲುಪುತ್ತಿವೆ. ಇನ್ನೂ ಅನೇಕ ಅಭಿವೃದ್ಧಿ ಯೋಜನೆಗಳು ಜನರನ್ನು ತಲುಪುವ ಹಂತದಲ್ಲಿವೆ. ರಾಜ್ಯದಲ್ಲಿ ರಾಜ್ಯ ಸರ್ಕಾರವೂ ರಾಜ್ಯದ ಮೂಲೆಮೂಲೆಯಲ್ಲೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ, ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಸುಭಾಷ್ ಗುನಗಿ, ನಗರ ಮಂಡಲದ ಅಧ್ಯಕ್ಷರಾದ ನಾಗೇಶ್ ಕುರ್ಡೇಕರ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಊರ ನಾಗರಿಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top