ಶಿರಸಿ: ಬಸ್ ಹತ್ತುವಾಗ ಪಿಕ್ ಪಾಕೆಟ್ ಮಾಡಿದ್ದ ಆರೋಪಿಯನ್ನು ಇಲ್ಲಿನ ನಗರ ಠಾಣಾ ಪೊಲೀಸರು 10 ದಿನಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಹಳೇ ಬಸ್ ನಿಲ್ದಾಣದಲ್ಲಿ ನ.07ರಂದು ವ್ಯಕ್ತಿಯೊಬ್ಬ ಬಸ್ ಹತ್ತುವಾಗ ಆತನ ಕಿಸೆಯಲ್ಲಿದ್ದ 75,000 ನಗದು ಕಳವಾಗಿತ್ತು. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು, ಆರೋಪಿ ಹುಬ್ಬಳ್ಳಿ ಮಹಾಕಾಳಿ ನಗರದ ಮಹೇಶ ಕಾಳೆಯನ್ನ ಬಂಧಿಸಿದ್ದಾರೆ. ಈತನಿಂದ 60 ಸಾವಿರ ರೂ.ಗಳನ್ನ ಜಪ್ತಿಪಡಿಸಿಕೊಳ್ಳಲಾಗಿದೆ.
ಪಿಕ್ ಪಾಕೆಟ್ ಮಾಡಿದ್ದವನೀಗ ಪೋಲೀಸರ ಅತಿಥಿ
