ಹೊನ್ನಾವರ: ಉಪವಿಭಾಗ ವ್ಯಾಪ್ತಿಯಲ್ಲಿ ಗ್ರಾಹಕರ ಮೊಬೈಲ್‌ಗಳಿಗೆ ಬಾಕಿ ವಿದ್ಯುತ್ ಬಿಲ್ ತುಂಬದೆ ಉಳಿದರೆ ಅಂತಹ ಮನೆಗಳ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡುವುದಾಗಿ ಸುಳ್ಳು ಸಂದೇಶಗಳು ಬರುತ್ತಿದ್ದು, ಅವುಗಳನ್ನು ಪರಿಗಣಿಸಬಾರದು. ಒಂದುವೇಳೆ ಗ್ರಾಹಕರಿಗೆ ಈ ಬಗ್ಗೆ ಸಂದೇಹವಿದ್ದಲ್ಲಿ ನೇರವಾಗಿ ಹೆಸ್ಕಾಂ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರಿಗೆ ನೀಡಿದ ಬಿಲ್ಲನ್ನು 15 ದಿನಗಳ ಒಳಗಾಗಿ ಪ್ರಭಾತನಗರದ ಹೆಸ್ಕಾಂ ಕಛೇರಿಯ ಕೌಂಟರ್‌ನಲ್ಲಿ, ಭಟ್ಕಳ ಸರ್ಕಲ್‌ನಲ್ಲಿರುವ ಎಟಿಪಿ ಕೌಂಟರ್‌ನಲ್ಲಿ ಅಥವಾ ಮೊಬೈಲ್ ಆ್ಯಪ್, ಆನ್ಲೈನ್ ನೆಟ್ ಬ್ಯಾಂಕಿಂಗ್ ಮೂಲಕವು ತುಂಬಬಹುದು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ವಿದ್ಯುತ್ ಕಡಿತಗೊಳಿಸುವ ಸುಳ್ಳು ಸಂದೇಶಗಳನ್ನ ನಂಬದಿರಿ’
![](https://euttarakannada.in/wp-content/uploads/2021/08/euk-logo-1-640x438.jpg?v=1628473623)