• Slide
    Slide
    Slide
    previous arrow
    next arrow
  • ಮನರಂಜಿಸಿದ ಇಂಡಿಯನ್ ಐಡಲ್ ಟೀಮ್‌ನ ರಸಮಂಜರಿ: ಕುಮಟಾ ವೈಭವಕ್ಕೆ ಅದ್ಧೂರಿ ತೆರೆ

    300x250 AD

    ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಐದು ದಿನಗಳು ಅದ್ಧೂರಿಯಾಗಿ ನಡೆದ ಕುಮಟಾ ವೈಭವ -2022ರ ಸಾಂಸ್ಕೃತಿ ಕಾರ್ಯಕ್ರಮಕ್ಕೆ ತೆರೆಬಿದ್ದಿದ್ದು, ಸಮಾರೋಪ ಸಮಾರಂಭದಲ್ಲಿ ಇಂಡಿಯನ್ ಐಡಲ್ ಟೀಮ್‌ನಿಂದ ಪ್ರದರ್ಶನಗೊಂಡ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.
    ತಾಂಡವ ಕಲಾನಿಕೇತನ ಸಂಸ್ಥೆ ಮತ್ತು ಕುಮಟಾ ವೈಭವ ಸಮಿತಿಯಿಂದ ಸಂಘಟಿಸಲಾದ ಕುಮಟಾ ವೈಭವ -2022ರ ಸಮಾರೋಪ ಸಮಾರಂಭದಲ್ಲಿ ಚಿತ್ರಕಲಾಕಾರ ಮಹೇಶ ಗುನಗಾ ಕೂಜಳ್ಳಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಮಾತನಾಡಿ, ಕುಮಟಾ ತಾಲೂಕು ಸಾಂಸ್ಕೃತಿಕ ನಗರಿಯಾಗಿದೆ. ಇಲ್ಲಿನ ಜನರಿಗೆ ಕಲೆ, ಸಂಸ್ಕೃತಿಯಲ್ಲಿ ಅಭಿರುಚಿ ಇದೆ. ಹಾಗಾಗಿ ಮಣಕಿ ಮೈದಾನದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಯಶಸ್ವಿಯಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವ ಮೂಲಕ ಆ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸುತ್ತಾರೆ. ಅದರಲ್ಲೂ ಮಂಜುನಾಥ ನಾಯ್ಕರ ನೇತೃತ್ವದಲ್ಲಿ ನಡೆದ ಕುಮಟಾ ವೈಭವ ನಿಜಕ್ಕೂ ವೈಭವಭರತವಾಗಿಯೇ ಸಂಪನ್ನಗೊಂಡಿರುವುದು ಖುಷಿಯ ವಿಚಾರ ಎಂದರು.
    ತಾಂಡವ ಕಲಾನಿಕೇತನ ಸಂಸ್ಥೆಯ ಅಧ್ಯಕ್ಷ ಮಂಜುನಾಥ ನಾಯ್ಕ, ಈ ಕುಮಟಾ ವೈಭವಕ್ಕೆ ಸಿದ್ಧತೆ ಮಾಡಿಕೊಳ್ಳುವಾಗ ಈ ಕಾರ್ಯಕ್ರಮವನ್ನು ನಿಲ್ಲಿಸಲು ಕೆಲ ಕಾಣದ ಕೈಗಳು ಸಾಕಷ್ಟು ಪ್ರಯತ್ನ ಮಾಡಿವೆ. ಅಮ್ಯೂಸ್ಮೆಂಟ್ ಪಾರ್ಕನವರಿಗೆ ಅನೇನ ಬೆದರಿಕೆ ಕರೆಗಳು ಹೋಗಿವೆ. ಅವರ‍್ಯಾರು ಕುಮಟಾಕ್ಕೆ ಬರಲು ಒಪ್ಪದಿದ್ದಾಗ ಗೋವೆ ಮತ್ತು ಕೇರಳದಿಂದ ಅಮ್ಯೂಜ್‌ಮೆಂಟ್ ಪಾರ್ಕ್ ತರಿಸುವ ಮೂಲಕ ಕುಮಟಾ ವೈಭವವನ್ನು ಕುಮಟಾ ಜನತೆಗೆಯ ಸಹಕಾರದಲ್ಲಿ ಯಶಸ್ವಿಗೊಳಿಸಿದ್ದೇನೆ. ನಾನು ನನ್ನ ತಂದೆ ಹೆಸರಿನಲ್ಲಿ ಈ ಕಾರ್ಯಕ್ರಮ ಸಂಘಟಿಸುತ್ತಿದ್ದು, ಯಾರಿಂದಲೂ ದೇಣಿಗೆ ಸಂಗ್ರಹಿಸುವುದಿಲ್ಲ. ದಾನಿಗಳು ಪ್ರೀತಿಯಿಂದ ನೀಡಿದರೆ ಮಾತ್ರ ಸ್ವೀಕರಿಸಿದ್ದೇನೆ. ಎಲ್ಲ ಖರ್ಚುವೆಚ್ಚವನ್ನು ನಾನೇ ಭರಿಸಿಕೊಂಡು ಕಾರ್ಯಕ್ರಮ ಮಾಡುವಾಗ ಎಲ್ಲರೂ ಸಹಕಾರ ನೀಡಬೇಕು. ಕಾರ್ಯಕ್ರಮ ಯಶಸ್ವಿಗೊಳಿಸಿದ ಕುಮಟಾ ಜನತೆಗೆ ಧನ್ಯವಾದ ಸಲ್ಲಿಸಿದರು. ಅಲ್ಲದೇ ಈ ಬಾರಿ ಸಂಸ್ಥೆಯಿಂದ ಐವರು ಕಲಾವಿದರಿಗೆ ಮಾಸಾಶನ ಬಿಡುಗಡೆ ಮಾಡಿದ್ದೇನೆ ಎಂದರು.
    ಚಿತ್ರ ಕಲಾವಿದ ಚರಣ ನಾಯ್ಕ ಇಡಗುಂಜಿ, ಕೃಷಿಕ ಗೋವಿಂದ ದೇಶಭಂಡಾರಿ, ತಾಳ ಮದ್ದಳೆ ವಾದಕ ಸುಕ್ರಪ್ಪ ನಾಯ್ಕ, ಗಾಯಕ ಮಾರುತಿ ನಾಯ್ಕ ಕೂಜಳ್ಳಿ ಮತ್ತು ಕೃಷ್ಣ ಪಟಗಾರ ಅವರಿಗೆ ಮಾಶಾಸನ ಘೋಷಣೆ ಮಾಡಲಾಯಿತು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗರಾಜ ನಾಯ್ಕ ವಹಿಸಿದ್ದರು.
    ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆ ಶೈಲಾ ಗೌಡ, ಲಕ್ಷ್ಮಿ ಚಂದಾವರ, ಡಿಜೆವಿ ಪ್ರೌಢ ಶಾಲೆ ಮುಖ್ಯಾಧ್ಯಾಪಕ ದಯಾನಂದ ದೇಶಭಂಡಾರಿ, ಕುಮಟಾ ವೈಭವ ಸಮಿತಿ ಅಧ್ಯಕ್ಷ ನಾಗೇಶ ನಾಯ್ಕ, ರವಿ ಶೇಟ್, ಜಯಾ ಶೇಟ್, ನಿರಂಜನ ನಾಯ್ಕ, ಪವನ ಗುನಗಾ ಇತರರು ಇದ್ದರು.

    ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಗೋವಾ ನೃತ್ಯ ಕಲಾವಿದರಿಂದ ಪ್ರದರ್ಶನಗೊಂಡ ಬೆಲ್ಲಿ ಡ್ಯಾನ್ಸ್ ಪ್ರೇಕ್ಷಕರನ್ನು ರಂಜಿಸಿತು. ಇಂಡಿಯನ್ ಐಡಲ್ ಟೀಮ್‌ನಿಂದ ನಡೆದ ರಸಮಂಜರಿ ಪ್ರೇಕ್ಷಕರ ಮನ ಮುಟ್ಟಿತ್ತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top