ಶಿರಸಿ: ಬಾಗಲಕೋಟದಲ್ಲಿ ಇತ್ತೀಚೆಗೆ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಚಂದನ ಆಂಗ್ಲ ಮಾಧ್ಯಮ ಪ್ರೌಢಶಾಲೆ ನರೇಬೈಲ್‌ನ 10ನೇ ವರ್ಗದ ವಿದ್ಯಾರ್ಥಿನಿ ಸಂಭ್ರಮಾ ಹೆಗಡೆ ಯೋಗ ಸ್ಫರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ಇವಳ ಸಾಧನೆಗೆ ಕಾರ್ಯದರ್ಶಿ ಎಲ್.ಎಂ.ಹೆಗಡೆ, ಆಡಳಿತಾಧಿಕಾರಿ ವಿದ್ಯಾ ನಾಯ್ಕ, ಆಡಳಿತ ಮಂಡಳಿ ಸದಸ್ಯರು,ಶಿಕ್ಷಕರು,ಪಾಲಕರು ಹರ್ಷವ್ಯಕ್ತಪಡಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.
ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಚಂದನ ವಿದ್ಯಾರ್ಥಿನಿ ಆಯ್ಕೆ
![](https://euttarakannada.in/wp-content/uploads/2022/11/SPORTS-STATE-1-730x438.jpg?v=1668664899)