Slide
Slide
Slide
previous arrow
next arrow

ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಸಾಧನೆ

300x250 AD

ಶಿರಸಿ: ತಾಲೂಕಾ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿಯಲ್ಲಿ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ತೋರಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

5ನೇ ವರ್ಗದ ಪ್ರತೀಕ ಹೆಗಡೆ ಕನ್ನಡ ಕಂಠಪಾಠದಲ್ಲಿ, 6ನೇ ವರ್ಗದ ವರ್ಷಿಣಿ ಎಸ್ ಹೆಗಡೆ ಸಂಸ್ಕೃತ ಧಾರ್ಮಿಕ ಪಠಣದಲ್ಲಿ, 6ನೇ ವರ್ಗದ ಅನ್ವಿತಾ ಆರ್.ವಿ ಕಥೆ ಹೇಳುವುದು, ಭಾಷಣ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
4ನೇ ವರ್ಗದ ಮನು ಚಿತ್ರಕಲೆ- ಬಣ್ಣ ಹಚ್ಚುವಿಕೆಯಲ್ಲಿ, 4ನೇ ವರ್ಗದ ಪೂಜಾ ಭಟ್ ಭಕ್ತಿಗೀತೆ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 7ನೇ ವರ್ಗದ ವಿಕಾಸ ಪಾಟೀಲ್ ಚಿತ್ರಕಲೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಶಿಕ್ಷಕ ವೃಂದ,ವಿದ್ಯಾರ್ಥಿಗಳು ಮತ್ತು ಪಾಲಕರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top