Slide
Slide
Slide
previous arrow
next arrow

TSSನಲ್ಲಿ ಸಹಕಾರ ಸಪ್ತಾಹ; ಸಂಘದ ಸದಸ್ಯರಿಗೆ ಸನ್ಮಾನ; ಬಹುಮಾನ ವಿತರಣೆ

300x250 AD

ಶಿರಸಿ: 69ನೇ ಸಹಕಾರ ಸಪ್ತಾಹದ ಅಂಗವಾಗಿ ಟಿಎಸ್‍ಎಸ್ ಸಂಸ್ಥೆಯಲ್ಲಿ ನಿರಂತರವಾಗಿ ವ್ಯವಹಾರ ಮಾಡಿದ 49ಸದಸ್ಯರಿಗೆ ಬುಧವಾರ ಸನ್ಮಾನಿಸಿ ಗೌರವಿಸಲಾಯಿತು. ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿಯ ಸೇಲ್ ಯಾರ್ಡ್‍ನಲ್ಲಿ ನಡೆದ ಸಭೆಯಲ್ಲಿ ಸಂಘದ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹಾಗು ನಿರ್ದೇಶಕರು ಸದಸ್ಯರನ್ನು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಟಿಎಸ್‍ಎಸ್ ಉತ್ಸವ ಲಕ್ಕಿ ಡಿಪ್, ಗೋವು ಮತ್ತು ನೀವು ಗೋ ಪೂಜೆ ಪೋಟೋ ಸ್ಪರ್ಧೆ ಮತ್ತಿತರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಹಾಯಕ ಆಯುಕ್ತ ದೇವರಾಜ ಆರ್ ಬಹುಮಾನ ವಿತರಿಸಿ ಮಾತನಾಡಿ, ಟಿಎಸ್‍ಎಸ್ ಸಂಸ್ಥೆ ನೂರು ವರ್ಷ ತಲುಪಿದೆ. ಟಿಎಸ್‍ಎಸ್ ಸಂಸ್ಥೆ ವ್ಯವಹಾರ ವಿಸ್ತರಿಸಿಕೊಳ್ಳುತ್ತಾ ಬೃಹದಾಕಾರವಾಗಿ ಬೆಳೆದಿದೆ. ಬೇರೆ ಬೇರೆ ತಾಲೂಕು, ಜಿಲ್ಲೆಗಳಲ್ಲಿ ಸಂಸ್ಥೆ ಹೆಜ್ಜೆ ಇಡುತ್ತಿರುವುದು ಒಳ್ಳೆಯ ಕೆಲಸ ಎಂದರು.

ರೈತರ ಬೆಳೆಗೆ ಒಳ್ಳೆಯ ಬೆಲೆ ಬರಬೇಕು, ರೈತರಲ್ಲಿ ಸಂಘಟನೆಯನ್ನು ಆಗಬೇಕು, ಆರ್ಥಿಕ ವ್ಯವಸ್ಥೆ ಸುಧಾರಣೆಯಾಗಬೇಕು ಎಂದಾದರೆ ಇಂಥ ಸಂಘಸಂಸ್ಥೆಗಳು ಬೆಳೆಯಬೇಕು. ಇನ್ನಷ್ಟು ಪ್ರಗತಿಯತ್ತ ಸಾಗಬೇಕು. ರೈತರು ಆರ್ಥಿಕವಾಗಿ ಸಬಲತೆ ಸಧಿಸಲು ರೈತರು ಸಂಘಟಿತರಾಗಬೇಕು. ಇದನ್ನು ಟಿಎಸ್‍ಎಸ್ ಸಂಸ್ಥೆ ಮಾಡುತ್ತಿದೆ ಎಂದರು.

300x250 AD

ಟಿಎಸ್‍ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಮಾತನಾಡಿ, ಪ್ರತಿವರ್ಷ ಸಹಕಾರಿ ಸಪ್ತಾಹದಲ್ಲಿ ಹಿರಿಯ ಸದಸ್ಯರಿಗೆ ಸನ್ಮಾನ ಮಾಡುತ್ತಿದ್ದೇವೆ. ಸಮಸ್ಥೆಯ ಬೆಳೆವಣಿಗೆಗೆ ಸದಸ್ಯರ ಸಹಕಾರವೇ ಕಾರಣವಾಗಿದೆ. ಇದರಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಲು ಕಾರಣವಾಗಿದೆ ಎಂದರು.

ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ನಿರ್ದೇಶಕರಾದ ಸಿ.ಎನ್.ಹೆಗಡೆ ಹೂಡ್ಲಮನೆ, ಶಶಾಂಕ ಹೆಗಡೆ ಶೀಗೇಹಳ್ಳಿ, ನಾರಾಯಣ ನಾಯ್ಕ ಮೆಣಸಿ, ನರಸಿಂಹ ಭಟ್ಟ ಗುಂಡ್ಕಲ್, ಮಹಾಲಕ್ಷ್ಮೀ ಹೆಗಡೆ ಲಿಂಗದಕೋಣ, ಕೆ.ಎಂ.ಹೆಗಡೆ ಅಬ್ರಿ, ಶಾರದಾ ಹೆಗಡೆ ಸಿರ್ಸಿಮಕ್ಕಿ ಉಪಸ್ಥಿತರಿದ್ದರು. ಗೋಪಾಲ ಹೆಗಡೆ ನಿರೂಪಿಸಿದರು.

Share This
300x250 AD
300x250 AD
300x250 AD
Back to top