ಹಳಿಯಾಳ: ಇಲ್ಲಿನ ಶ್ರೀ ವಿ. ಆರ್. ಡಿ. ಎಮ್. ಟ್ರಸ್ಟನ್ ವಿಮಲ ವಿ ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ ಶಾಲೆಯಲ್ಲಿ ದೇಶದ ಮೊದಲ ಪ್ರಧಾನ ಮಂತ್ರಿಯಾದ ಪಂಡಿತ ಜವಾಹರಲಾಲ್ ನೆಹರು ಜನ್ಮದಿನವನ್ನು ಮಕ್ಕಳ ದಿನಾಚರಣೆಯ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮೊದಲು ಶಾಲೆಯ ಹಲವು ಶಿಕ್ಷಕರು ಪ್ರಾರ್ಥನಾಗೀತೆ ಹಾಗೂ ಮಕ್ಕಳ ಜನುಮದಿನದ ಶುಭಾಶಯದ ಗೀತೆ ಹಾಡಿ ಎಲ್ಲ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದರು. ಶಾಲೆಯ ಪ್ರಾಂಶುಪಾಲರು, ವಿದ್ಯಾರ್ಥಿಗಳು ಹಾಗೂ ಮುಖ್ಯಅತಿಥಿಯಾಗಿ ಆಗಮಿಸಿದ ಶಾಲೆಯ ಹಳೆಯ ವಿದ್ಯಾರ್ಥಿ ಡಾ. ವಿಶ್ವನಾಥ ಕದಂರವರು ಜ್ಯೋತಿ ಬೆಳಗಿಸಿ ನೆಹರುರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ರೂಪಿಸಿದ ನೃತ್ಯ ಹಾಗೂ ಮೌಲ್ಯಾಧಾರಿತ ವಿದ್ಯಾರ್ಥಿಜೀವನದಲ್ಲಿ ಶಿಸ್ತಿನ ಮಹತ್ವ ಸಮಯದ ಸದುಪಯೋಗ ವಿಷಯದ ಕುರಿತು ನಾಟಕ ಪ್ರಸ್ತುತಿ ಪಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲೆಯ ಹಳೆಯ ವಿದ್ಯಾರ್ಥಿ ಡಾ. ವಿಶ್ವನಾಥಕದಂರವರು ಮಾತನಾಡುತ್ತಾ ಈ ಶಾಲೆಯಲ್ಲಿ ತಾನು ವಿದ್ಯಾರ್ಥಿಯಾಗಿ ಕಲಿತ ಹಲವಾರು ಮೌಲ್ಯಗಳು, ಶಿಸ್ತು, ಸಹನೆ ಮತ್ತು ಪರಿಶ್ರಮವು ಇಂದು ನನಗೆ ಸಮಾಜದಲ್ಲಿಉತ್ತಮ ವೈದ್ಯನಾಗಿ ಜನರ ಸೇವೆ ಮಾಡಲು ಸಹಕಾರಿಯಾಗಿದೆ ಎನ್ನುತ್ತಾ, ಎಲ್ಲ ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ಹಾಗೂ ತಮ್ಮ-ತಮ್ಮ ಗುರಿಯ ಸಾಧನೆಯತ್ತ ಸಾಗುವ ಹಂಬಲವಿರಲಿ ಎಂದರು.
ಶಾಲೆಯ ಪ್ರಾಂಶುಪಾಲರಾದ ಡಾ. ಸಿ. ಬಿ. ಪಾಟೀಲರವರು ಸಾಂದರ್ಭಿಕವಾಗಿ ಮಾತನಾಡುತ್ತಾ “ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬAತೆ, ವಿದ್ಯಾರ್ಥಿಗಳ ಜೀವನ ಅಮೂಲ್ಯವಾದದ್ದು, ಪ್ರತಿಯೊಂದು ಮಗುವು ತಮ್ಮ ತಂದೆ-ತಾಯಿಗಳ ಕಣ್ಮಣಿ ಹಾಗೂ ದೇಶದ ಆಸ್ತಿ ಇದ್ದ ಹಾಗೆ ಸರಿಯಾದ ಮಾರ್ಗದರ್ಶನದಲ್ಲಿ ನಡೆದು ಜೀವನ ರೂಪಿಸಿಕೊಳ್ಳಿರಿ ಎನ್ನುತ್ತಾ” ಸಮಸ್ತ ನಾಡಿನಎಲ್ಲ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ಈ ದಿನದ ಅಂಗವಾಗಿ ಸಭಾಕಾರ್ಯಕ್ರಮದ ನಂತರದಲ್ಲಿ ಶಿಕ್ಷಕರು ಮಕ್ಕಳಿಗಾಗಿ ಮನರಂಜನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ನಿರೂಪಣೆ ಶ್ರೀಮತಿ. ಮಾಧವಿ ಮುತಾಲಿಕ ಸ್ವಾಗತ ಹಾಗೂ ವಂದನಾರ್ಪಣೆಯನ್ನುಶಿಕ್ಷಕರು ನೆರವೇರಿಸಿದರು.