ಭಟ್ಕಳ: ಇಲ್ಲಿನ ಹೆಬಳೆ ಗ್ರಾ.ಪಂ.ವ್ಯಾಪ್ತಿಯ ಐ.ಸಿ.ಎಸ್.ಇ. ಪಠ್ಯಕ್ರಮ ಬೋಧಿಸುವ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳು ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವ ಮೌಲಾನಅಬುಲ್ ಕಲಾಂ ಅಝಾದ್‌ರವರಜನ್ಮದಿನ “ರಾಷ್ಟ್ರೀಯ ಶಿಕ್ಷಣ ದಿನ” ವನ್ನು ಶೈಕ್ಷಣಿಕ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನದೊಂದಿಗೆ ವಿಶಿಷ್ಟವಾಗಿ ಆಚರಿಸಿದರು.
ಇಲ್ಲಿನ ಜಾಲಿ ಬೀಚ್ ಸಮುದ್ರಕಿನಾರೆ ಶೈಕ್ಷಣಿಕಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಪ್ರದರ್ಶಿಸಿದ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾದರೆ ಏನೆಲ್ಲ ಅನಾಹುತಗಳು ನಡೆಯಬಹುದೆಂಬುದರ ಕುರಿತು ಮನಮುಟ್ಟುವ ರೀತಿಯಲ್ಲಿ ಪ್ರದರ್ಶನ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಜ್ಲಿಸೆಇಸ್ಲಾಹ್-ವ-ತಂಝೀಮ್ ನೂತನ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ವಿದ್ಯಾರ್ಥಿಗಳು ಪ್ರದರ್ಶಿಸಿದ ಬೀದಿ ನಾಟಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಮಾಜದಲ್ಲಿ ಶಿಕ್ಷಣದ ಕುರಿತಂತೆ ಹೆಚ್ಚೆಚ್ಚು ಜಾಗೃತಿಯನ್ನು ಮೂಡಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ ಹಾಗೂ ಶಮ್ಸ್ ಸ್ಕೂಲ್ ನ ಹಿರಿಯ ಶಿಕ್ಷಕ ಎಂ.ಆರ್.ಮಾನ್ವಿ, ಮೌಲಾನಅಬುಲ್ ಕಲಾಂ ಅಝಾದ್ ಹಿಂದೂ-ಮುಸ್ಲಿಮ್ ಏಕತೆಯ ಪ್ರತೀಕವಾಗಿದ್ದರು. ಜಾಮಿಯ ಮಿಲ್ಲಿಯ ಮತ್ತುಐ.ಐ.ಟಿಯಂತಹಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಅಪಾರಕೊಡುಗೆಯನ್ನು ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅನಂ ಆಲಾ ಎಂ.ಟಿ, ಬೀದಿ ನಾಟಕ ನಿದೇರ್ಶಿಸಿದ ಶಿಕ್ಷಕ ಅಬ್ದುಲ್ ಸುಭಾನ್ ನದ್ವಿ ಉಪಸ್ಥಿತರಿದ್ದರು.