Slide
Slide
Slide
previous arrow
next arrow

ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ.

300x250 AD

ಶಿರಸಿ:ನಗರದ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.14ರಂದು ಜವಾಹರ ಲಾಲ್ ನೆಹರು ರವರ ಜನ್ಮ ದಿನದ ನೆನಪಿಗಾಗಿ ಆಚರಿಸುವ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ನೆಹರುರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಶಾಲಾ ಸಂಸತ್ತಿನ ಪ್ರತಿನಿಧಿಗಳು , ಆಗಮಿಸಿದ ಅತಿಥಿಗಳಿಂದ ದೀಪ ಬೆಳಗುವದರೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಎಲ್.ಆಯ್.ಸಿ ಶಿರಸಿ ವ್ಯವಸ್ಥಾಪಕ ಜಿ.ಎನ್.ಭಟ್ ಮತ್ತು ಪ್ರತಿನಿಧಿ ಜಿ.ವಿ.ಹೆಗಡೆ ಆಗಮಿಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಾರ್ಯದರ್ಶಿ ಎಲ್.ಎಂ. ಹೆಗಡೆ, ಆಡಳಿತಾಧಿಕಾರಿ ವಿದ್ಯಾ ನಾಯ್ಕ ಮಕ್ಕಳಿಗೆ ಶುಭ ಹಾರೈಸಿದರು. ನಂತರ ವಿದ್ಯಾರ್ಥಿಗಳಿಗೆ ಛದ್ಮ ವೇಷ ಸ್ಫರ್ದೆ ಏರ್ಪಡಿಸಲಾಗಿತ್ತು . ವಿದ್ಯಾರ್ಥಿಗಳು ವಿವಿಧ ವೇಷ ಭೂಷಣಗಳಿಂದ ಗಮನ ಸೆಳೆದರು. ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕರು ದೇಶದ ವಿವಿಧ ಭಾಗಗಳ ಉಡುಪುಗಳನ್ನು ಧರಿಸಿ ರಂಜಿಸಿದರು.

300x250 AD
Share This
300x250 AD
300x250 AD
300x250 AD
Back to top