Slide
Slide
Slide
previous arrow
next arrow

ಲಯನ್ಸ್ ಕ್ವೆಸ್ಟ್ ಶಿಕ್ಷಕರಿಗಾಗಿ ತರಬೇತಿ ಕಾರ್ಯಕ್ರಮ

300x250 AD

ಶಿರಸಿ: ಲಯನ್ಸ್ ಮಲ್ಟಿಪಲ್ ಡಿಸ್ಟ್ರಿಕ್ಟ್ 317 ದಿಂದ ನವೆಂಬರ್ 11 ರಂದು ಲಯನ್ಸ್ ಕ್ವೆಸ್ಟ್ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮವನ್ನು ಲಯನ್ಸ್ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಮಲ್ಟಿಪಲ್ ಕ್ವೆಸ್ಟ್ ಛೇರ್‌ಪರ್ಸನ್ ಡಾ. ಎಸ್. ನಾಗರಾಜ ರಾವ್ ರವರಿಂದ Techniques for Improved Teaching ಬಗ್ಗೆ ಶಿರಸಿ ಲಯನ್ಸ್ ಶಾಲೆ ಮತ್ತು ಶ್ರೀ ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾ ಶಾಲೆಯ ಶಿಕ್ಷಕರಿಗಾಗಿ ವಿಶೇಷ ಉಪನ್ಯಾಸ ನಡೆಯಿತು. ಈ ಎರಡು ಶಾಲೆಗಳಲ್ಲಿ ಲಯನ್ಸ್ ಕ್ವೆಸ್ಟ್ ಮುಖಾಂತರ ಹದಿಹರೆಯದ ಮಕ್ಕಳಿಗಾಗಿ ಕೌಶಲ್ಯಗಳು ತರಗತಿಗಳು 2019-20ರಿಂದ ನಡೆಸಲ್ಪಡುತ್ತಿದೆ. ಚಟುವಟಿಕೆಗಳ ಮೂಲಕ 42 ತರಗತಿಗಳಲ್ಲಿ ವಿಶೇಷ ತರಬೇತಿಯನ್ನು ಹೊಂದಿರುವ ಶಿಕ್ಷಕರ ಮೂಲಕ ನಡೆಸಲಾಗುತ್ತಿದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬರೀ ಒಳ್ಳೆಯ ಶಿಕ್ಷಕರಾಗಿದ್ದಾರೆ ಸಾಲದು, ಅತ್ಯುತ್ತಮ ಶಿಕ್ಷಕರಾಗಿರುವುದು ಅವಶ್ಯವಾಗಿದೆ. ಮಕ್ಕಳು ಕೇಳಿದ ಪಾಠಕ್ಕಿಂತ ಪಾಠ ಮಾಡಿದ ಶಿಕ್ಷಕರನ್ನು ನೋಡಿ ಅವರಿಂದ ಪ್ರಭಾವಿತರಾಗಿ ಕಲಿಯುವುದೇ ಹೆಚ್ಚು. ಒಬ್ಬ ಆದರ್ಶ, ಯಶಸ್ವಿ ವಿದ್ಯಾರ್ಥಿಯನ್ನು ತಯಾರಿ ಮಾಡಲು ಶಿಕ್ಷಕ ಸ್ವತ: ಆದರ್ಶ ಪ್ರಾಯರಾಗಿರಬೇಕು ಎಂದು ಮನ ಮುಟ್ಟುವಂತೆ ತಿಳಿಸಿದರು. ಚೆನ್ನಾಗಿ ತೃಪ್ತಿಯಾಗುವಷ್ಟು ನಿದ್ದೆ ಮತ್ತು ವೃತ್ತಿಗೆ ತಕ್ಕ ಆಹಾರ ದಿನಚರಿಯಲ್ಲಿ ಚಟುವಟಿಕೆಯನ್ನು ಕೊಡುತ್ತದೆ. ಬೆಳಗಿನ ಜಾವದ 15 ರಿಂದ 30 ನಿಮಿಷದ ಧ್ಯಾನ ಮನಸ್ಸನ್ನು ನಿಯಂತ್ರಣದಲ್ಲಿರಿಸುತ್ತದೆ. ದೇಹ ಮತ್ತು ಮನಸ್ಸು ಪ್ರಸನ್ನತೆಯಿಂದ ಕೂಡಿದಾಗ ತರಗತಿಗಳು Mindful Class Room ಆಗಲಿಕ್ಕೆ ಸಾಧ್ಯ. Mind Mapping, Emotional Intelligence ಬಗ್ಗೆ ತಿಳಿಸಿ ಮಕ್ಕಳ ಏಕಾಗ್ರಚಿತ್ತತೆಯ ಅವಧಿ ಬಹಳ ಕಡಿಮೆಯಿರುವುದರಿಂದ ಆಗಾಗ ವಿರಾಮಗಳನ್ನು ನೀಡಬೇಕೆಂದು ಹೇಳಿದರು. ಕ್ರಿಯಾಶೀಲತೆಗಾಗಿ ಸಂಗೀತ, ಚಿತ್ರಕಲೆ, ನೃತ್ಯ ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಸೂಚಿಸಿದರು. ಶಿಕ್ಷಕರ ಒತ್ತಡ ಸ್ಥಿತಿ ಗುರುತಿಸಲು Stress test ಮಾಡಿ ಸುಧಾರಣೆಯ ಕ್ರಮಗಳನ್ನು ತಿಳಿಸಿದರು. ಮಕ್ಕಳಲ್ಲಿ ಸಾಮಥ್ಯ, ಸ್ವಾವಲಂಬನೆ, ಆತ್ಮ ಧೈರ್ಯ ಬೆಳೆಸಬೇಕು. ಮಕ್ಕಳೊಂದಿಗಿನ ಭಾವನಾತ್ಮಕ ಸಂಬಂಧ ಎಲ್ಲವನ್ನೂ ಸುಲಭವಾಗಿಸುತ್ತದೆ ಎಂದು ಕಿವಿ ಮಾತು ಹೇಳಿದರು. ಭಾಗವಹಿಸಿದ ಎಲ್ಲರಿಗೆ ಪ್ರಶಂಸಾಪತ್ರವನ್ನು ನೀಡಲಾಯಿತು.
ಲಯನ್ಸ ಜಿಲ್ಲೆಯ ಹಿರಿಯ ಪದಾಧಿಕಾರಿಗಳಾದ ಜಿಲ್ಲೆ 317B ಯ ಗವರ್ನರ್ ಸುಗ್ಗಲಾ ಯಲಯಲಿ, ಒಂದನೇ ಉಪ ಜಿಲ್ಲಾ ಗವರ್ನರ್ ಅರ್ಲ್ ಬ್ರಿಟೋ, ಎರಡನೇ ಉಪ ಜಿಲ್ಲಾ ಗವರ್ನರ್ ಮನೋಜ್ ಮನೇಕ್, ಜಿಲ್ಲಾ Quest Mentor, PDG ಸಸೀಂದ್ರನ್ ನಾಯರ್, ರೀಜನ್ ಛೇರ್‌ಪರ್ಸನ್ ಜ್ಯೋತಿ ಭಟ್‌ರವರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಬೆಂಗಳೂರಿನಿAದ ಜಿಲ್ಲೆ 317 ದಿಂದ DC ಹಂಸವೇಣಿ ಮತ್ತು ಜಿಲ್ಲೆ 317ಂ ದಿಂದ ಮೈಸೂರಿನ ರವಿಕುಮಾರ್, ಜಿಲ್ಲೆಯ Quest ಸದಸ್ಯರಾದ ಹೊನ್ನಾವರದ ಡಾ. ಎ.ವಿ. ಶ್ಯಾನಭಾಗ, ಬೆಳಗಾವಿಯ ಡಾ. ನಾಗರಾಜ ಮರೆಣ್ಣವರ್ ಮತ್ತು ಹಾವೇರಿಯ ಕಬ್ಬಿನ ಕಂತಿಮಠರವರು ಭಾಗವಹಿಸಿದ್ದರು. ಶಿರಸಿ ಕ್ಲಬ್ಬಿನ ಅಧ್ಯಕ್ಷರಾದ ತ್ರಿವಿಕ್ರಮ್ ಪಟವರ್ಧನ್‌ರವರು ಎಲ್ಲರನ್ನೂ ಸ್ವಾಗತಿಸಿದರು ಮತ್ತು Dc for Quest ರಮಾ ಪಟವರ್ಧನರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಲಯನ್ಸ್ ಶಾಲೆಯ ಮುಖ್ಯಾಧ್ಯಾಪಕರಾದ ಶಶಾಂಕ ಹೆಗಡೆಯವರು ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

300x250 AD
Share This
300x250 AD
300x250 AD
300x250 AD
Back to top