Slide
Slide
Slide
previous arrow
next arrow

ರೋಗಿಗಳ ನಗುಮೊಗದೊಂದಿಗೆ ಸಂಪನ್ನಗೊಂಡ ಶಸ್ತ್ರಚಿಕಿತ್ಸಾ ಶಿಬಿರ

300x250 AD

ದಾಂಡೇಲಿ: ಖ್ಯಾತ ವೈದ್ಯರಾದ ಡಾ.ಮೋಹನ ಪಾಟೀಲ್ ಅವರ ನೇತೃತ್ವದಲ್ಲಿ ನಗರದ ಪಾಟೀಲ್ ಆಸ್ಪತ್ರೆಯಲ್ಲಿ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ, ಎ.ಎಸ್.ಐ’ನ ಕರ್ನಾಟಕ ರಾಜ್ಯ ಅಧ್ಯಾಯ ಮತ್ತು ಪಾಟೀಲ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನ:11 ರಿಂದ ಮೂರು ದಿನಗಳ ಉಚಿತ ಶಸ್ತ್ರಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾ ತಾಲ್ಲೂಕಿನ ಆಯ್ದ, ಅತೀ ಅವಶ್ಯವಿರುವ ಹಾಗೂ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದು, ತೀವ್ರ ಅನಾರೋಗ್ಯಗೊಂಡಿದ್ದ 16 ರೋಗಿಗಳನ್ನು ಈ ಮೊದಲೆ ಗುರುತಿಸಿ, ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿತ್ತು. ಈ 16 ಜನರಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಯ್ತು. ಮೂರು ದಿನಗಳಿಂದ ನಡೆದ ಈ ಶಿಬಿರವು ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡ 16 ಜನ ರೋಗಿಗಳ ನಗುಮೊಗದೊಂದಿಗೆ ಸಂಪನ್ನಗೊಂಡಿತು.
ಈ ಶಿಬಿರದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ 40 ತಜ್ಞ ವೈದ್ಯರುಗಳ ತಂಡ ಭಾಗವಹಿಸಿ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿ ಮುಗಿಸಿ ಮಾನವೀಯತೆಯನ್ನು ಮರೆದಿದೆ. ದೂರದೂರುಗಳಿಂದ, ಹೊರ ರಾಜ್ಯದಿಂದ ಸ್ವಯಂಸ್ಪೂರ್ತಿಯಾಗಿ ವೈದ್ಯರುಗಳು ಆಗಮಿಸಿ, ಶಿಬಿರವನ್ನು ನಡೆಸಿಕೊಟ್ಟಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅತ್ಯಂತ ಶಿಸ್ತುಬದ್ಧವಾಗಿ ಹಾಗೂ ಅವಶ್ಯಕತೆಯಿದ್ದ ಬಡವರನ್ನೆ ಆಯ್ಕೆ ಮಾಡಿ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಿ, ಶಿಬಿರವನ್ನು ನಿಜಕ್ಕೂ ಸಾರ್ಥಕಗೊಳಿಸಿದ ಡಾ.ಮೋಹನ್ ಪಾಟೀಲ್ ಹಾಗೂ ಅವರ ನೇತೃತ್ವದ ತಂಡ ಶ್ಲಾಘನೆಗೆ ಪಾತ್ರವಾಗಿದೆ.
ಶಿಬಿರದಲ್ಲಿ ಭಾಗವಹಿಸಿದ್ದ ವೈದ್ಯರುಗಳು ಶಿಬಿರವನ್ನು ಅತ್ಯುತ್ತಮವಾಗಿ ಸಂಘಟಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಸಂಘಟನೆಯ ವತಿಯಿಂದ ಡಾ.ಮೋಹನ್ ಪಾಟೀಲ್ ದಂಪತಿಗಳನ್ನು ಸನ್ಮಾನಿಸಿದರು. ಇಂದು ನಡೆದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರದಲ್ಲಿ ಭಾಗವಹಿಸಿ ವೈದ್ಯರುಗಳನ್ನು ಡಾ.ಮೋಹನ್ ಪಾಟೀಲ್ ಅವರು ತುಂಬು ಹೃದಯದಿಂದ ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಡಾ.ಎಸ್.ಎಲ್.ಕರ್ಕಿ, ಡಾ.ಜ್ಯೋತಿ ಪಾಟೀಲ್, ಡಾ.ಸೈಯದ್, ಡಾ.ಪುಷ್ಕರ್ ಪಾಟೀಲ್, ಡಾ.ತನ್ಮಯ್ ಪಾಟೀಲ್ ಸೇರಿದಂತೆ ನಗರದ ಹಿರಿಯ, ಕಿರಿಯ ವೈದ್ಯರುಗಳು, ಗಣ್ಯ ಮಹನೀಯರು ಉಪಸ್ಥಿತರಿದ್ದರು. ಈ ಶಿಬಿರ ಮೂರು ದಿನದ ಶಿಬಿರವಾಗದೇ, 16 ಜನರ ಬಾಳಿಗೆ ಬೆಳಕಾಗಿ, ಆಸರೆಯಾಗಿ ಮೂಡಿ ಬಂದಿದ್ದು ವಿಶೇಷವಾಗಿತ್ತು.

300x250 AD
Share This
300x250 AD
300x250 AD
300x250 AD
Back to top