Slide
Slide
Slide
previous arrow
next arrow

ಅರಣ್ಯ ಭೂಮಿ ಹೋರಾಟಕ್ಕೆ ಬೆನ್ನೆಲುಬಾಗಿರುವ ರವೀಂದ್ರ ನಾಯ್ಕಗೆ ರಾಜಕೀಯ ಶಕ್ತಿ ನೀಡಿ: ಸುಬ್ರಾಯ ಭಟ್

300x250 AD

ಸಿದ್ಧಾಪುರ: ಅರಣ್ಯ ಭೂಮಿ ಸಮಸ್ಯೆ ಜಿಲ್ಲೆಯ ಮಹತ್ವದ ಸಮಸ್ಯೆಯಾಗಿದ್ದು, ಭೂಮಿ ಹಕ್ಕಿನ ಹೋರಾಟಕ್ಕೆ ಜನಪ್ರತಿನಿಧಿಗಳ ಸ್ಫಂದನೆ ದೊರಕದೇ ಇರುವುದು ವಿಷಾದಕರ. ಈ ಹಿನ್ನೆಲೆಯಲ್ಲಿ ಅರಣ್ಯ ಭೂಮಿ ಹಕ್ಕಿನ ಮೂರು ದಶಕದ ಹೋರಾಟಕ್ಕೆ ಬೆನ್ನೆಲುಬು ಆಗಿರುವ ರವೀಂದ್ರ ನಾಯ್ಕಗೆ ರಾಜಕೀಯ ಶಕ್ತಿ ನೀಡಿ ಎಂದು ಹಿರಿಯ ಸಾಮಾಜಿಕ ಮತ್ತು ಸಹಕಾರಿ ಧುರೀಣರಾದ ಸುಬ್ರಾಯ ಭಟ್ಟ ಗಡಿಹಿತ್ಲು ಅವರು ಹೇಳಿದರು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಶ್ರಯದಲ್ಲಿ ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯತ ಸಭಾಂಗಣದಲ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯ ‘ಅಸಮರ್ಪಕ ಜಿಪಿಎಸ್ ಮೇಲ್ಮನವಿ ಅಭಿಯಾನ’ ದ ಸಭೆಯಲ್ಲಿ ಅರಣ್ಯ ಅತಿಕ್ರಮಣದಾರರನ್ನ ಉದ್ದೇಶಿಸಿ ಮಾತನಾಡುತ್ತಾ ಮೇಲಿನಂತೆ ಹೇಳಿದರು.
ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುವಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಪ್ರದರ್ಶಿಸಬೇಕು, ಇಲ್ಲದಿದ್ದಲ್ಲಿ ಅರಣ್ಯ ಅತಿಕ್ರಮಣದಾರರು ನಿರಾಶ್ರಿತರಾಗುವುದರಲ್ಲಿ ಸಂಶಯವಿಲ್ಲ ಎಂದು ಅವರು ಹೇಳಿದರು.
ನಿರಂತರ ಹೋರಾಟ: ಅರಣ್ಯವಾಸಿಗಳ ಹಿತ ಕಾಪಾಡುವ ದಿಶೆಯಲ್ಲಿ ಹೋರಾಟಗಾರರ ವೇದಿಕೆಯು ನಿರಂತರ ಹೋರಾಟ ನಡೆಸುತ್ತಿದ್ದು, ಹೋರಾಟದಲ್ಲಿ ಬದ್ಧತೆಯನ್ನು ಪ್ರದರ್ಶಿಸಿದೆ. ಕಾನೂನಾತ್ಮಕ ಮತ್ತು ಸಂಘಟಿತ ಹೋರಾಟ ಮುಂದುವರೆಸಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಕಾರ್ಯಕ್ರಮದಲ್ಲಿ ವಿನಾಯ ಗೌಡ ಸ್ವಾಗತಿಸಿ ವಂದಿಸಿದರು. ಸಭೆಯನ್ನು ಉದ್ದೇಶಿಸಿ ಕೆಟಿ ನಾಯ್ಕ ಕ್ಯಾದಗಿ, ಚೌಡು ತಮ್ಮಣ ಗೌಡ, ಧನಂಜಯ ಬಲೀಂದ್ರ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಅಣ್ಣಪ್ಪ ಈಶ್ವರ ನಾಯ್ಕ, ಶ್ರೀಧರ ಗಣಪ ನಾಯ್ಕ, ನಾರಾಯಣ ಮರಾಠಿ, ಉದಯ ಸುಬ್ರಾಯ ಮರಾಠಿ ಮುಂತಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top