ಯಲ್ಲಾಪುರ : ಮಕ್ಕಳ ದಿನಾಚರಣೆಯ ಪ್ರಯುಕ್ತ ಅರಬೈಲ್ ಸರಕಾರಿ ಹಿರಿಯ ಪ್ರಾ ಶಾಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಯಲ್ಲಾಪುರದ ಸಿವಿಲ್ ನ್ಯಾಯಾಧೀಶರಾದ ಲಕ್ಷೀಬಾಯಿ ಬಸನಗೌಡ ಪಾಟೀಲ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮಕ್ಕಳ ಶಿಕ್ಷಣದ ಮಹತ್ವ, ಬಾಲಾಪರಾಧ, ಬಾಲ್ಯವಿವಾಹ ತಡೆಗಟ್ಟುವ ಕುರಿತು ತಿಳಿಸಿದರು. ಪ್ರತಿ ಮಗುವಿನ ಆರೋಗ್ಯ ಹಾಗೂ ಉತ್ತಮ ಸಮಾಜದ ಸಂಘಟಿಸುವಲ್ಲಿ ಶಿಕ್ಷಕರು, ವೈದ್ಯರು, ವಕೀಲರು, ಹೆಚ್ಚು ಪರಿಣಾಮ ಬೀರುವರು. ಹೀಗಾಗಿ ಎಲ್ಲರೂ ಉಚಿತ ಕಡ್ಡಾಯ ಶಿಕ್ಷಣವನ್ನು ನೀಡುವ ಸರಕಾರಿ ಶಾಲೆಗಳತ್ತ ಕ್ರಿಯಾಶೀಲ ಶಿಕ್ಷಕರ ಗರಡಿಯಲ್ಲಿ ಮಕ್ಕಳು ಬೆಳೆಯುವಂತಾಗಬೇಕೆಂದು ಆಶಿಸಿದರು. ಮಕ್ಕಳ ಚಟುವಟಿಕಗಳ ಹೆಮ್ಮೆ ತಂದಿದೆ ಎಂದ ಅವರು, ಮಕ್ಕಳಿಗೆ ಕಾನೂನನ್ನು ಪಾಲಿಸುವ ಕುರಿತು ಅರಿವು ನೀಡಿದರು.
ವಕೀಲರ ಸಂಘದ ಅಧ್ಯಕ್ಷರಾದ ಆರ್ ಕೆ ಭಟ್, ಯಲ್ಲಾಪುರ ಇವರು ಮಕ್ಕಳ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.
ಸಹಾಯಕ ಸರ್ಕಾರಿ ಅಭಿಯೋಜಕರಾದ ಜೀನತ್ ಬಾನು ಶೇಖ, ಪ್ಯಾನಲ್ ವಕೀಲರಾದ ಸರಸ್ವತಿ ಭಟ್ , ಪ್ಯಾರಾಲೀಗಲ್ ವಾಲೆಂಟೀಯರ್ ಸುಧಾಕರ್ ನಾಯಕ ,ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ರೂಪಾ ಬಾಂದಿ ವಹಿಸಿದ್ದರು.
ಎಸ್ಡಿಎಂಸಿ ಸದಸ್ಯರು , ಪಂಚಾಯತ್ ಸದಸ್ಯರು, ಊರ ನಾಗರಿಕರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಕ್ಕಳ ಪಾಲಕರು ಕುಂಬಕಲಶದೊಂದಿಗೆ ಹಾಗೂ ವಿದ್ಯಾರ್ಥಿಗಳು ಗಣ್ಯರನ್ನು ಸ್ವಾಗತಿಸಿದರು. ಸಾಹಿತಿ ಹಾಗೂ ಮುಖ್ಯಾಧ್ಯಾಪಕಿ ಶಿವಲೀಲಾ ಹುಣಸಗಿ ಸ್ವಾಗತಿಸಿದರು. ಶಿಕ್ಷಕ ನಾಗರಾಜ ಆಚಾರಿ ವಂದಿಸಿದರು, ಕನಿಷ್ಕಾ ರಾಣೆ ವಂದಿಸಿದರು , ಪಂಚಮಿ ಸಂಗಡಿಗರು ಪ್ರಾರ್ಥಿಸಿದರು.