Slide
Slide
Slide
previous arrow
next arrow

ಜಿಲ್ಲಾಧಿಕಾರಿ ಕಚೇರಿ ಬಳಿ ಗೌರವಧನ ಕಾರ್ಮಿಕರ ಧರಣಿ; ನೌಕರರನ್ನಾಗಿ ಪರಿಗಣಿಸುವಂತೆ ಬೇಡಿಕೆ

300x250 AD

ಕಾರವಾರ : ಗ್ರಾಮ ಪಂಚಾಯಿತಿ ವಾಟರ್ ಮನ್‌ಗಳು ಕಾರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಚ್‌ಆರ್‌ಎಂಎಸ್ ಮೂಲಕ ವೇತನ ಪಾವತಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿಯ ಧರಣಿಯನ್ನು ಸೋಮವಾರ ಪ್ರಾರಂಭಿಸಿದ್ದಾರೆ. ಕಳೆದ ತಿಂಗಳು ಜಿಲ್ಲಾ ಪಂಚಾಯತ್‌ಗೆ ಮನವಿ ನೀಡಿ ಬೇಡಿಕೆ ಈಡೇರಿಕೆಗೆ ನ.13 ರತನಕ ಗಡುವು ನೀಡಲಾಗಿತ್ತು. ಜಿಲ್ಲಾ ಪಂಚಾಯತ್ ವಾಟರ್ ಮನ್‌ಗಳ ಬೇಡಿಕೆ ಈಡೇರಿಸಿಲ್ಲ. ಹಾಗಾಗಿ ಧರಣಿ ಅನಿವಾರ್ಯವಾಯಿತು. ಸರ್ಕಾರ 2017ರಲ್ಲಿ ಪಂಚಾಯತ್ ನೌಕರರನ್ನು ಪಂಚತ0ತ್ರದಲ್ಲಿ ಅಳವಡಿಸಲು ಹೇಳಿದೆ. 2021ರಲ್ಲಿ ಚೆಕ್ ಮೂಲಕ ಗೌರವಧನ ಪಾವತಿಗೆ ಸರ್ಕಾರದ ನಿರ್ಬಂಧ ಇದೆ. ಆದರೂ. ಜಿಲ್ಲೆಯ 450 ರಷ್ಟು ಸಿಬ್ಬಂದಿಗೆ , ಅದರಲ್ಲೂ ಪಂಚಾಯತ್ ಸಿಬ್ಬಂದಿಗೆ ಚೆಕ್ ಮೂಲಕ ಗೌರವಧನ ಕೊಡುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಸವರಾಜ ಸಂಗಮೇಶ್ವರ ತಿಳಿಸಿದರು.

ಧರಣಿ ಸ್ಥಳದಲ್ಲಿ ಅವರ ಮಾತನಾಡಿ ಉತ್ತರ ಕನ್ನಡದ ಪ್ರತಿ ಗ್ರಾಪಂನಲ್ಲಿ 5 ಜನ ಖಾಯಂ ನೌಕರರಿದ್ದರೆ, 5 ಜನ ಅತಂತ್ರ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಖ್ಯವಾಗಿ ವಾಟರ್ ಮೆನ್‌ಗಳು, ಡಾಟ ಎಂಟ್ರಿ ಅಪರೇಟರ್‌ಗಳಿಗೆ ಎಪಿಎಂಎಸ್ ಅಥವಾ 2.0 ವ್ಯವಸ್ಥೆ ಅಡಿ ವೇತನ ಪಾವತಿಸಬೇಕು ಹಾಗೂ ಸುಪ್ರಿಂಕೋರ್ಟ ತೀರ್ಪು ಹಾಗೂ ಸರಕಾರದ ಆದೇಶದಂತೆ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂಗೊಳಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಆಗ್ರಹಿಸಿದರು.
2017ರಲ್ಲಿ ಸರಕಾರವು ಗ್ರಾಮ ಪಂಚಾಯಿತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕ್ಲರ್ಕ್, ವಾಟರ್ ಮ್ಯಾನ್, ಡಾಟಾ ಎಂಟ್ರಿ ಆಪರೇಟರ್ ಹಾಗೂ ಸ್ವಚ್ಛತಾ ಸಿಬ್ಬಂದ್ದಿಯನ್ನು ಸರಕಾರಿ ನೌಕರರನ್ನಾಗಿ ನೇಮಿಸಬೇಕು ಎಂದು ಆದೇಶ ಮಾಡಿದೆ. ಆದರೆ ಜಿಲ್ಲೆಯ ಅಧಿಕಾರಿಗಳು ಸರಕಾರದ ಆದೇಶವನ್ನು ಗಾಳಿಗೆ ತೂರಿದ್ದಾರೆ. ಹೀಗಾಗಿ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ಮಾಡಲಿದ್ದೇವೆ ಎಂದರು. ಪ್ರತಿ ಗ್ರಾಮ ಪಂಚಾಯತ್‌ಗೆ ಹತ್ತರಿಂದ ಹದಿನೈದು ಗ್ರಾಮಗಳು ಬರುತ್ತವೆ. ಹೀಗಾಗಿ ಪ್ರತಿ ಗ್ರಾಮಕ್ಕೆ ವಾಟರ್‌ಮನ್‌ಗಳ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ಅನೇಕ ದಶಕಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ 350ಕ್ಕೂ ಹೆಚ್ಚು ನೌಕರರಿದ್ದಾರೆ. ಅವರೆಲ್ಲಾ ಮುಕ್ತ ವಿವಿ ಯಿಂದ ಎಸ್ ಎಸ್ ಎಲ್ ಸಿ ಮುಗಿಸಿದ ಪ್ರಮಾಣ ಪತ್ರ ಹೊಂದಿದ್ದಾರೆ. ಈ ಪ್ರಮಾಣ ಪತ್ರವನ್ನು ಉತ್ತರ ಕನ್ನಡದಲ್ಲಿ ಮಾನ್ಯತೆ ಮಾಡುತ್ತಿಲ್ಲ. ಇತರೆ ಜಿಲ್ಲೆಗಳಲ್ಲಿ ಮುಕ್ತ ವಿವಿ ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ ಮಾನ್ಯ ಮಾಡಿದ್ದಾರೆ. ಅಲ್ಲದೆ ಅನುದಾನದ ಕೊರತೆ ಕಾರಣ ಹೇಳುತ್ತಿದ್ದಾರೆ. ಆದರೆ ಇದು ವಾಸ್ತವವಲ್ಲ. ಪಂಚತ0ತ್ರ ಯೋಜನೆ ಅಡಿ ಸೇರ್ಪಡೆಯಾದ ನೌಕರರು ಈಗ ಎಪಿಎಂಎಸ್ ಅಡಿ ಸೇರ್ಪಡೆ ಮಾಡಲು ಇರುವ ತೊಂದರೆ ಆದರೂ ಏನು ಎಂದು ಸಂಗಮೇಶ್ವರ ಪ್ರಶ್ನಿಸಿದರು. ವಾಟರಮನ್‌ಗಳಿಗೆ ಕಳೆದ 16 ತಿಂಗಳಿ0ದ ವೇತನವಾಗಿಲ್ಲ ಕೆಲವರಿಗೆ 10 ಮತ್ತು 5 ತಿಂಗಳ ವೇತನ ಬಾಕಿಯಿದೆ. ಇವರನ್ನು ಎಪಿಎಂಎಸ್ ಅಡಿ ಸೇರಿಸಿದರೆ ಸಂಬಳವಾದರೂ ಪ್ರತಿ ತಿಂಗಳು ಆಗುತ್ತದೆ. ನರೇಗಾ, 16ನೇ ಹಣಕಾಸು ಯೋಜನೆ , ಪಂಚಾಯತ್ ಗೆ ಸರ್ಕಾರ ನೀಡುವ 6 ಲಕ್ಷ ಅನುದಾನದಲ್ಲಿ ಗುತ್ತಿಗೆ ನೌಕರರ ವೇತನ ನೀಡಬಹುದಾಗಿದೆ. ಆದರೆ ಇದನ್ನು ಜಿಲ್ಲಾ ಪಂಚಾಯತ್ ಮಾಡುತ್ತಿಲ್ಲ ಎಂದರು. ನಿಧಿ -1 , ನಿಧಿ2 ಯೋಜನೆಯಲ್ಲಿ ಸಹ ವಾಟರ್‌ಮನ್ ಗಳಿಗೆ ವೇತನ ನೀಡಬಹುದಾಗಿದೆ ಎಂದು ಅಹಿಂದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ವೈ,ಸುಣಗಾರ ಪ್ರತಿಪಾದಿಸಿದರು.
ಈತನಕ ಜಿಲ್ಲೆಯಲ್ಲಿ 350 ಕ್ಕೂ ಹೆಚ್ಚು ನೌಕರರು ಗುತ್ತಿಗೆ ಆಧಾರದ ಮೇಲೆಯೇ ದುಡಿಸಿಕೊಳ್ಳುತ್ತಿದ್ದಾರೆ. ಸರಕಾರದ ಆದೇಶದಂತೆ ಪ್ರಸ್ತಾವನೆ ಕಳುಹಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಡಾ ಹಿಂದೇಟು ಹಾಕುತಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅವರಿಗೆ ಮನವಿ ಕೂಡಾ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಗಲಿಲ್ಲ. ನೌಕರರಿಗೆ 2016 ರಿಂದ ಈಚೆಗೆ ವೇತನ ಕೂಡಾ ಸರಿಯಾಗಿ ಮಾಡುತ್ತಿಲ್ಲ. ಜತೆಗೆ ವೇತನವನ್ನು ನಗದು ಅಥವಾ ಚೆಕ್ ಮೂಲಕ ಕೊಡದೇ, ಗುತ್ತಿಗೆ ನೌಕರರ ಬ್ಯಾಂಕ್ ಆಕೌಂಟ್ ಖಾತೆಗೆ ಜಮಾ ಮಾಡಬೇಕು ಎನ್ನುವ ಸರಕಾರದ ಆದೇಶವಿದೆ. ಈ ಬಗ್ಗೆಯೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದರು. ಗ್ರಾಮ ಪಂಚಾಯತ್ ವಾಟರ್ ಮನ್ ಹಾಗೂ ಗುತ್ತಿಗೆ ನೌಕರರು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಬೇಡಿಕೆಗಳ ಮನವಿ ಅರ್ಪಿಸಿದರು. ಜಿಲ್ಲಾಧಿಕಾರಿಗಳು ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಮಾತನಾಡುವ ಭರವಸೆ ನೀಡಿದರು.
ಧರಣಿ ಮುಂದುವರಿದಿದ್ದು, ಧರಣಿಯಲ್ಲಿ ಜಾವಿದ್ ವಾಗಿನಕೋಡು, ಲಕ್ಷ್ಮಣ ಕೊಳಕಾರ, ಮಾದೇಶ ಹುಲ್ಲೂರು, ಮೆಹಬೂಬ್ ಮುಲ್ಲಾ, ಮಂಜುನಾಥ ಬೋವಿ, ಸುರೇಶ್ ಕರ್ಜಗಿ, ಈರಪ್ಪ ಬೆನಕಣ್ಣನವರ, ನವುಲು ಅಪ್ಪು ಸಳಕೆ, ಗಣಪತಿ ನಾಯ್ಕ, ಮಾಂಬು ಜಾಣು ಗಾವಡೆ, ಸಂತೋಷ ಇಡಗೋಡ, ಶೇಖಪ್ಪ, ರಾಮು ಚಕ್ರಸಾಲಿ, ಜಾನು ಗಾವಡೆ, ಮಲ್ಲಪ್ಪ ಬೊಂಗಾಳೆ, ಜೀವನ್ ಲಮಾಣಿ, ಸುಭಾಷ್ ಹರಿಜನ, ಪರಮೇಶ ಪಾಟೀಲ, ಬಂಕಪ್ಪ ಕಾಮನಳ್ಳಿ, ಚಂದ್ರಶೇಖರ್ ಚೆನ್ನಯ್ಯ, ಇಸ್ಮಾಯಿಲ್ ಮರುಸಾಬ, ಜಯಪ್ಪ ಕಲಕರಡಿ ಮುಂತಾದವರು ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top