• first
    second
    third
    Slide
    Slide
    previous arrow
    next arrow
  • ಕುಳಗಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್; ಸವಾರನಿಗೆ ಗಾಯ

    300x250 AD

    ದಾಂಡೇಲಿ: ಶ್ರೀಕ್ಷೇತ್ರ ಉಳವಿಗೆ ಹೋಗಿ ಹಿಂದುರುಗಿ ಬರುತ್ತಿದ್ದಾಗ ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಬಿದ್ದು, ವಾಹನ ಸವಾರ ಗಾಯಗೊಂಡ ಘಟನೆ ದಾಂಡೇಲಿ ನಗರದ ಸಮೀಪದಲ್ಲಿರುವ ಕುಳಗಿ ರಸ್ತೆಯಲ್ಲಿ ಸೋಮವಾರ ನಡೆದಿದೆ.
    ಧಾರವಾಡ ಮೂಲದ 50 ವರ್ಷ ವಯಸ್ಸಿನ ಶಿವಯ್ಯ ಬಸಯ್ಯ ಪೂಜಾರ ಎಂಬವರೇ ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದು, ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಇವರು ಶ್ರೀ.ಕ್ಷೇತ್ರ ಉಳವಿಗೆ ಹೋಗಿ ದೇವರ ದರ್ಶನ ಪಡೆದು ಹಿಂದುರುಗಿ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಇವರನ್ನು ತಕ್ಷಣವೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತರಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top