• first
  second
  third
  Slide
  previous arrow
  next arrow
 • ಬೇಲೆಕೇರಿ ನಾಡಕಚೇರಿಯಲ್ಲಿ ಶಾಸಕರಿಂದ ಸಾರ್ವಜನಿಕ ಅಹವಾಲು ಸಭೆ

  300x250 AD

  ಅಂಕೋಲಾ: ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಇವರು ಬೆಲೇಕೇರಿ ನಾಡಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯನ್ನು ನಡೆಸಿದರು.
  ಸಭೆಯಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಬೇಲೆಕೇರಿ ವ್ಯಾಪ್ತಿಯಲ್ಲಿ ರೈತರಿಗೆ ಹಣ್ಣು ಹಂಪಲು ಬೆಳೆಯಲು ಹಂಚಿಕೆಯಾದ ಜಮೀನುಗಳು ರೈತರ ಹೆಸರಲ್ಲಿದ್ದು ನೌಕಾನೆಲೆ ಯೋಜನೆ ಬಂದ ನಂತರ ಜಮೀನಿಗೆ ಸಾಗುವಳಿ ಮಾಡಲು ರಸ್ತೆ ಇಲ್ಲದೆ ತೊಂದರೆಯಾಗುತ್ತಿದೆ ಎಂದು ಅಲಗೇರಿಯ ನಿವಾಸಿ ಗೌರೀಶ ನಾಯಕ ಹೇಳಿದರು. ಅಲ್ಲದೆ ನೌಕಾನೆಲೆಯ ಪರಿಹಾರದ ಹಣ ಪಡೆಯುವಾಗ ಆದಾಯ ತೆರಿಗೆಯನ್ನು ಕಟ್ ಮಾಡಿ ಹಣ ಸಂದಾಯವಾಗಿತ್ತು. ನಂತರ ಪ್ಯಾನ್ ಕಾರ್ಡ ಮೂಲಕ ಕಟ್ಟಿದ ತೆರಿಗೆಯನ್ನು ವಾಪಸ್ ಕೊಟ್ಟಿದ್ದರು. ಆದರೆ ಈ ವರೆಗೂ ಅವರನ್ನು ತೆರಿಗೆದಾರರೆಂದು ಪರಿಗಣಿಸಿದ್ದರಿಂದ ರೈತರು ಕಿಸಾನ ಸಮ್ಮಾನ್ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ ಎಂದರು.
  ಸವಿತಾ ಬಾನಾವಳಿಕರ ಮಾತನಾಡಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಹಿಂದೆ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ನೀರು ಬಿಡುತ್ತಿದ್ದರು ಆದರೆ ಈಗ ಕೇವಲ ಎರಡು ಗಂಟೆ ಮಾತ್ರ ನೀರು ಬಿಡುತ್ತಿರುವದರಿಂದ ಜನರಿಗೆ ತುಂಬ ಸಮಸ್ಯೆಯಾಗುತ್ತಿದೆ ಎಂದರು. ಸಮಸ್ಯೆಯನ್ನು ಆಲಿಸಿದ ಶಾಸಕಿ ತಕ್ಷಣ ಸಂಬAಧಪಟ್ಟ ಇಲಾಖೆಯ ಅಧಿಕಾರಿಯನ್ನು ಫೋನ್ ಮೂಲಕ ಸಂಪರ್ಕಿಸಿ ಮೊದಲಿನಂತೆ 12 ತಾಸು ನೀರು ಬಿಡುವಂತೆ ಸೂಚಿಸಿದರು. ಬೆಲೇಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕಿ ಇಲ್ಲದಿರುವ ಕುರಿತು ಗಮನಕ್ಕೆ ತಂದರು.
  ಅಂಕೋಲಾದಿಂದ ಬೆಲೇಕೇರಿಗೆ 9.30 ಕ್ಕೆ ಬಿಡುತ್ತಿದ್ದ ಬಸ್ ಸಮಯ ಬದಲಾವಣೆ ಮಾಡಿದ್ದು ಹಿಂದಿನ ಸಮಯಕ್ಕೆ ಬಿಡುವಂತೆ ವಿನಂತಿಸಿದರು. ಭಾವಿಕೇರಿ ಗ್ರಾ.ಪಂ. ಅಧ್ಯಕ್ಷ ಪಾಂಡು ಭಟ್ಟಾ ಗೌಡ ಕೇಣಿಯಲ್ಲಿ ನಿರ್ಮಿಸುತ್ತಿರುವ ಕಸವಿಲೇವಾರಿ ಘಟಕದ ಸಮಸ್ಯೆಯನ್ನು ಬಗೆಹರಿಸುವಂತೆ ವಿನಂತಿಸಿದರು. ಸಭೆಯಲ್ಲಿ ಬೆಲೇಕೇರಿ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀ ಹಾದಿಮನಿ, ಉಪ ತಹಶೀಲ್ದಾರ ಗಿರೀಶ ಬಾನಾವಾಳಿಕರ, ತಾ.ಪಂ ಇಓ ಪರಶುರಾಮ ಸಾವಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top